
ಬಳ್ಳಾರಿ / ಕಂಪ್ಲಿ : ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ದಿಂದ ಲೇಖಕ, ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ಅವರ ಸಾಮಾಜಿಕ ಜೋಡಿ 6 ನೇ ಕಾದಂಬರಿ ‘ಬೆಂಕಿಯ ಶೀತ’ ಮತ್ತು 7 ನೇ ಕಾದಂಬರಿ ‘ಶೀತದ ಕಾವು’ ಕಾದಂಬರಿಗಳನ್ನು ಪಟ್ಟಣದ
ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದ ಹಿಂಭಾಗದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಖಂಡ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಡಾ|| ನಿಷ್ಠಿ ರುದ್ರಪ್ಪ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎನ್. ವೀರಭದ್ರಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕರ್ನಾಟಕ ಸಾಹಿತ್ಯ ಆಕಾಡೆಮಿ ಸದಸ್ಯರು ಹಾಗೂ ಕೊಪ್ಪಳದ ಡಾ|| ಸಿದ್ದಯ್ಯ ಪುರಾಣಿಕ್ ಟ್ರಸ್ಟ್ ನ ಅಧ್ಯಕ್ಷ ಅಜಮೀರ ನಂದಾಪುರ ಅವರು
ಕೃತಿ ಲೋಕಾರ್ಪಣೆ ಮಾಡಲಿದ್ದು, ಗಂಗಾವತಿಯ ಸಹ ಪ್ರಾಧ್ಯಾಪಕ ಡಾ|| ಮಮ್ತಾಜ್ ಬೇಗಂ ಕೃತಿ ವಿಮರ್ಶೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಿ. ವೀರಪ್ಪ, ಅಧ್ಯಕ್ಷರು ಶ್ರೀ ಪೇಟೆ ಬಸವೇಶ್ವರ ದೇವಸ್ಥಾನ. ಕೆ.ಬಿ. ವಾಸುಕುಮಾರ್. ಆರಕ್ಷಕ ನಿರೀಕ್ಷಕರು, ಬಿ. ಮಲ್ಲಿಕಾರ್ಜುನ, ಮುಖ್ಯಾಧಿಕಾರಿಗಳು ಪುರಸಭೆ, ಕ.ಮ. ಹೇಮಯ್ಯಸ್ವಾಮಿ, ಗೌರವಾಧ್ಯಕ್ಷರು, ಕನ್ನಡ ಹಿತರಕ್ಷಕ ಸಂಘ, ಕೃಷ್ಣ ಎಸ್. ಪೋಳ, ಅಧ್ಯಕ್ಷರು, ನಗರಾಭಿವೃದ್ಧಿ ಹೋರಾಟ ಸಮಿತಿ, ಕೋನೇರು ಶ್ರೀರಾಮಕೃಷ್ಣ, ಪಿರಮಿಡ್ ಮಾಸ್ಟರ್, ಸಣಾಪುರ ಕಂಪ್ಲಿ ಇವರು ಆಗಮಿಸಲಿದ್ದಾರೆಂದು ತಾಲೂಕು ಕ.ಸಾ.ಪ ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ, ಗೌರವ ಕಾರ್ಯದರ್ಶಿ ಅಂಬಿಗರ ಮಂಜುನಾಥ ತಿಳಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್


















