ಬಳ್ಳಾರಿ / ಕಂಪ್ಲಿ : ಪಟ್ಟಣದ ಜೋಗಿ ಕಾಲುವೆ ಹತ್ತಿರ ಇರುವ ಶ್ರೀ ನಿಮಿಷಾಂಬ ದೇವಸ್ಥಾನದಲ್ಲಿ ರವಿವಾರ ಸೋಮವಂಶ ಆರ್ಯ ಕ್ಷತ್ರಿಯ (ಚಿತ್ರಗಾರ) ಸಮಾಜದ ವತಿಯಿಂದ ವಿಜೃಂಭಣೆಯಿಂದ ಶ್ರೀ ನಿಮಿಷಾಂಬ ಜಯಂತಿ ಜರುಗಿತು.
ಪಲ್ಲಕ್ಕಿ ಉತ್ಸವ ಮತ್ತು ಕುಂಕುಮಾರ್ಚನೆ.
ಶ್ರೀ ಗಾಯತ್ರಿ ಹೋಮ ಮತ್ತು ವಿವಿಧ ಪೂಜೆಗಳು ನೆರವೇರಿದವು.
ದೇವಿ ನಿಮಿಷಾಂಬಳಿಗೆ ವಿಶೇಷ ಪೂಜೆ ಮತ್ತು ಅಲಂಕಾರವನ್ನು ಮಾಡಲಾಗಿತ್ತು.
ಮಡಿತೇರು ನಂತರ ಗಣಪತಿ ಹೋಮ, ಶ್ರೀ ಆದಿತ್ಯಾದಿ ನವಗ್ರಹ ಶ್ರೀ ಮೃತ್ಯಂಜಯ ಅಷ್ಟ ದಿಕ್ಷಾಲಕರು ಸಹಿತ ಶ್ರೀ ಗಾಯತ್ರಿ ಹೋಮ. ಪೂರ್ಣಾಹುತಿ, ಮಹಾಮಂಗಳಾರುತಿ ಹಾಗೂ ತೀರ್ಥ ಪ್ರಸಾದ ಪೂಜೆಗಳು ನಡೆದವು ನಂತರ ಅನ್ನಸಂತರ್ಪಣೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಮುಖ್ಯ ಅತಿಥಿಗಳಾಗಿ ಅಶೋಕ್ ರಾವ್ ಹೂಭಾಳೆ ಭಾಗವಹಿಸಿ ಮಾತನಾಡಿ, ನಮ್ಮ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ಮನಗಾಣಬೇಕು.
ಸಂಪೂರ್ಣ ಸಾಕ್ಷರತೆಯನ್ನು ಸಾಧಿಸುವುದು ಎಲ್ಲಾ ಕ್ಷೇತ್ರಗಳಲ್ಲಿನ ಪ್ರಗತಿಗೆ ಮೊದಲ ಮೆಟ್ಟಿಲಾಗಿದೆ.
ಸರ್ಕಾರಿ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
2026ನೇ ಸಾಲಿನ ಎಸ್.ಎಸ್.ಎಲ್.ಸಿ. ಅತಿ ಹೆಚ್ಚು ಅಂಕಗಳಿಸಿದ ವಿದ್ಯಾಶ್ರೀ ಬೂಸಾರೆ 550 (88%) ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪಿಯುಸಿ ಸುಪ್ರಿಯಾ ಚಿತ್ರಗಾರ್. 532 (88%) ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಮನ್ನಾರಾಯಣಾಶ್ರಮ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಶ್ರೀ ಪರಮಹಂಸ ನಾರಾಯಣ ವಿದ್ಯಾ ಭಾರತಿ ಶ್ರೀಗಳು ಸಾನಿಧ್ಯ ವಹಿಸಿದರು.
ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್, ಪದಾಧಿಕಾರಿಗಳಾದ ನಾಗರಾಜ್ ಉಬಾಳೆ, ಪರಶುರಾಮ ಬುಸಾರೆ
ಶಿವಾನಂದ ಉಬಾಳೆ, ಕೃಷ್ಣಪ್ಪ ಚಿತ್ರಗಾರ, ಬಿ. ರಾಜಣ್ಣ ಬೂಸಾರೆ, ನಾರಾಯಣ ಬೂಸಾರೆ, ಪ್ರಕಾಶ ಚಿತ್ರಗಾರ,
ಗಜಾನನ ಚಿತ್ರಗಾರ, ಪ್ರಶಾಂತ ಬೂಸಾರೆ, ರಾಜು ಕಾಂಬ್ಳೆಕರ್, ಹನುಮಂತ ಬೂಸಾರೆ, ವಾಸು ಬೂಸಾರೆ, ಮುರುಳಿ ಮನೋಹರ ಚಿತ್ರಗಾರ, ಭೀಮಣ್ಣ ಚಿತ್ರಗಾರ, ರವಿಲಿಂಗಪ್ಪ ಚಿತ್ರಗಾರ, ವೆಂಕಟೇಶ ಮಾರುತಿ ಚಿತ್ರಗಾರ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















