ಬಳ್ಳಾರಿ / ಕಂಪ್ಲಿ : ಪಟ್ಟಣದ ಆರ್ಯ ವೈಶ್ಯ ಸಮಾಜ ಬಾಂಧವರು ಅರಾಧ್ಯ ದೇವತೆ ಶ್ರೀ ವಾಸವಿ ಜಯಂತ್ಯೋತ್ಸವ ನ್ನು ಶ್ರದ್ಧಾ-ಭಕ್ತಿ, ಸಂಭ್ರಮ ಹಾಗೂ ಸಡಗರದಿಂದ ಭಾನುವಾರ ಜರುಗಿತು.
ಶ್ರದ್ದೆಯಿಂದ ನೆರವೇರಿಸಿದ ನಂತರ ಆರಂಭಗೊಂಡ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನಂತರ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಆರ್ಯವೈಶ್ಯ ಸಮಾಜದ ಅಧ್ಯಕ್ಷ ಡಿವಿ ಸುಬ್ಬರಾವ್ ಮಾತನಾಡಿ, ವಾಸವಿ ದೇವಿಯ ಆರಾಧನೆಯಿಂದ ಮಾನಸಿಕ ನೆಮ್ಮದಿ ಜತೆಗೆ ಜೀವನೋಲ್ಲಾಸಕ್ಕೆ ನಾಂದಿಯಾಗಲಿದೆ ಎಂದರು.
ನಂತರ ವಾಸವಿ ಯುವಜನ ಸಂಘದ ಅಧ್ಯಕ್ಷ ಡಿ. ಮಂಜೇಶ್ ಮಾತನಾಡಿ, ದೇವಿಯ ಆರಾಧನೆಯೇ ನಮ್ಮ ಬದುಕಿಗೆ ದಾರಿ ದೀಪ, ದೇವಿಯ ಆಶೀರ್ವಾದಿಂದ ಜೀವನ ಪಾವನವಾಗಿದೆ ಎಂದರು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಧರ್ಮಕರ್ತ ವೈ. ಚಂದ್ರಮೋಹನ್ ಶೆಟ್ಟಿ, ಮುಖ್ಯ ಅತಿಥಿಯಾಗಿ ಸಿಎಂ ರಾಧಿಕಾ, ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಜಿ. ರಾಜರಾವ್, ಕರ್ನಾಟಕ ಆರ್ಯವೈಶ್ಯ ಮಹಾಸಭದ ಸಹ- ಕಾರ್ಯದರ್ಶಿ ಕೆ. ಜಗದೀಶ್ ಮಹಿಳಾ ಮಂಡಲ ಅಧ್ಯಕ್ಷ ರಮಾದೇವಿ, ಮಹಿಳೆಯರು, ಯುವಕರು, ಮಕ್ಕಳು ಸೇರಿದಂತೆ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















