ಬಳ್ಳಾರಿ / ಕಂಪ್ಲಿ : ವಾಸವಿ ಜಯಂತಿ ಪ್ರಯುಕ್ತ ವಾಸವಿ ಯುವಜನ ಸಂಘ ನೇತೃತ್ವದಲ್ಲಿ, ಆರ್ಯವೈಶ್ಯ ಸಂಘ ಸ್ವಾಮಿ ವಿವೇಕಾನಂದ ಚಾರಿಟೇಬಲ್ ರಕ್ತ ಕೇಂದ್ರ ಬಳ್ಳಾರಿ ಹಾಗೂ ಗೋಪಿ ಚಾರಿಟೇಬಲ್ ರಕ್ತ ಕೇಂದ್ರ ಗಂಗಾವತಿ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರ ನಡೆಯಿತು.
ಶಿಬಿರದಲ್ಲಿ 32ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
ವಾಸವಿ ಯುವಜನ ಸಂಘದ ಅಧ್ಯಕ್ಷ ಡಿ ಮಂಜೇಶ್ ಮಾತನಾಡಿ, ವಾಸವಿ ಜಯಂತಿ ಪ್ರಯುಕ್ತ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ 32ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದ್ದಾರೆ,
ರಕ್ತದಾನ ಶಿಬಿರಗಳಿಂದ ತುರ್ತು ಸಂದರ್ಭಗಳಲ್ಲಿ, ಶಸ್ತ್ರಚಿಕಿತ್ಸೆಗಳು, ಅಪಘಾತಗಳು ಮತ್ತು ರಕ್ತಹೀನತೆಯಂತಹ ಗಂಭೀರ ಕಾಯಿಲೆಗಳಿಗೆ ಅಗತ್ಯವಾದ ರಕ್ತವನ್ನು ಒದಗಿಸುವ ಮೂಲಕ ಜೀವ ಉಳಿಸುವ ಪ್ರಮುಖ ಪಾತ್ರ ವಹಿಸುತ್ತವೆ. ಇವು ಸಮಾಜದಲ್ಲಿ ಸ್ವಯಂಪ್ರೇರಿತ ರಕ್ತದಾನದ ಸಂಸ್ಕೃತಿಯನ್ನು ಉತ್ತೇಜಿಸಿ, ರಕ್ತ ಬ್ಯಾಂಕ್ಗಳಲ್ಲಿ ರಕ್ತದ ಲಭ್ಯತೆಯನ್ನು ಖಚಿತಪಡಿಸುತ್ತವೆ ಮತ್ತು ಆರೋಗ್ಯ ತಪಾಸಣೆಯ ಮೂಲಕ ದಾನಿಗಳ ಆರೋಗ್ಯದ ಬಗ್ಗೆಯೂ ಜಾಗೃತಿ ಮೂಡಿಸುತ್ತವೆ. ಒಂದು ಯೂನಿಟ್ ರಕ್ತವು ಮೂರು ಜೀವಗಳನ್ನು ಉಳಿಸಬಲ್ಲದು ಎಂದರು.
ಶಿಬಿರದಲ್ಲಿ ರಕ್ತನಿದಿಯ ತಂತ್ರಜ್ಞರು, ಪ್ರಮುಖರಾದ ಡಿ. ಶ್ರೀಧರ ಶೆಟ್ಟಿ, ಡಿ. ಕೃಷ್ಣಪ್ಪ ಶೆಟ್ಟಿ, ನರಸಿಂಹಲು, ಸತ್ಯ, ರುದ್ರೇಶ್, ಪಿ. ತಿರುಮಲೇಶ್, ಗುರುಕೃಷ್ಣ ದನಪಾಲ್, ಸಿ. ಸುನಿಲ್ ಕುಮಾರ್, ಎ. ರವಿಕಿರಣ, ಎಚ್. ಹರೀಶ್, ಜಿ. ತಿರುಮಲೇಶ್, ಅರವಿಂದ್, ಬಿ. ಸತ್ಯನಾರಾಯಣ, ಕೆ. ಸುರೇಂದ್ರ, ಜಿ. ಶ್ರೀನಿವಾಸ್, ಡಿ.ಅನಿಲ್ ಕುಮಾರ್, ರಾಜೇಂದ್ರ ಸೇರಿದಂತೆ ಸಮಾಜ ಬಾಂಧವರು ಸೇರಿದಂತೆ ಇತರರು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















