ನಿತ್ಯ ಸಂಚಾರದ ಪುಟ್ಟ ಸರೋವರದ ಅಂಚಿನಲ್ಲಿ
ಚದುರಿ ಬಾಗಿ ತೂಗಿದ್ದ ಮರ ಗಿಡಗಳ ಸಾಲಿನಲ್ಲಿ
ಕಡಿದು ಬಿದ್ದಿದ್ದ ಹೆಚ್ಚುವರಿ ಪಕಳೆಗಳ ಸಂಗ್ರಹದಲ್ಲಿ
ಜೋಡಿಸಿಟ್ಟ ಪಚ್ಚೆ ಕುಂಕುಮ ವರ್ಣದ ಗುಚ್ಛವಿಲ್ಲಿ
ಶೋಭಿಸುತ ಚಿತ್ತವ ಸೆಳೆಯುತಿದೆ ಚಿತ್ತಾರದಲ್ಲಿ
ಓದುಗ ನಲ್ಮನಗಳಿಗೆ ಬಣ್ಣನೆಯು ಕಾವ್ಯದಲ್ಲಿ
ಸದಭಿರುಚಿಕರಲ್ಲಿಗೆ ಬರುತಿದೆ ನಲ್ಮುಂಜಾವಿನಲ್ಲಿ
ಸಂತಸದಿ ತೊಡಗಿಸಿಕೊಳ್ಳಲು ನಿತ್ಯ ಕಾಯಕಗಳಲ್ಲಿ
- ಲಲಿತಾ ಕೆ ಆಚಾರ್, ಬೆಂಗಳೂರು



















