
ಕೊಪ್ಪಳ :
ಶಬ್ದಗಳು ಜಗತ್ತನ್ನು ಆಳ್ವಿಕೆ ಮಾಡುತ್ತಿವೆ ಎಂದು ಡಾ. ಶಿವಬಸಪ್ಪ ಮಸ್ಕಿ ಅವರು ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರದಂದು ಕಾಲೇಜಿನ ಇಂಗ್ಲಿಷ್ ವಿಭಾಗದವತಿಯಿಂದ ಹಮ್ಮಿಕೊಂಡಿದ್ದ ಆಧುನಿಕ ಯುಗದಲ್ಲಿ ಸಂವಹನದ ಕೌಶಲ್ಯಗಳ ಕುರಿತು ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು. ಇಂದು ಜಗತ್ತುನ್ನು ಶಬ್ದಗಳು ಆಳ್ವಿಕೆ ಮಾಡುತ್ತಿವೆ. ಆಧುನಿಕ ತಂತ್ರಜ್ಞಾದಿಂದ ಭಾಷೆಗಳಲ್ಲಿ ಬದಲಾವಣೆಗಳು ಆಗಿವೆ. ಜನರು ಭಾಷೆಯ ಮೂಲಕ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಜನರು ಮೌಖಿಕ ಮತ್ತು ಅಮೌಖಿಕ ಸಂವಹನದ ಮೂಲಕ ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಇಂದು ಬಹುತೇಕ ಜನರು ಅಮೌಖಿಕ ಸಂವಹನವನ್ನು ಬಳಸುತ್ತಿದ್ದಾರೆ.
ಸಂದರ್ಶನ, ಗುಂಪು ಚರ್ಚೆ, ಸಂವಾದಗಳಲ್ಲಿ ಸಂವಹನ ಮುಖ್ಯ. ಹಣಕ್ಕಿಂತ ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು.
ಇಂಗ್ಲಿಷ್ ಭಾಷೆಯು ಜರ್ಮನಿಯ ಬುಡಕಟ್ಟು ಜನಾಂಗದವರಿಂದ ಪ್ರಾರಂಭ ಆಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಶ್ರೀ ಮತಿ ಸುಮಯ್ಯ ಅವರು ಮಾತನಾಡುತ್ತಾ ಸಂವಹನ ಬಹಳ ಮುಖ್ಯ. ಅದರಲ್ಲೂ ಶಿಕ್ಷಣದಲ್ಲಿ, ವಯಕ್ತಿಕ ಜೀವನದಲ್ಲಿ, ಉದ್ಯೋಗದಲ್ಲಿ ಮತ್ತು ಕುಟುಂಬದಲ್ಲಿ ಸಂವಹನ ಪ್ರಮುಖವಾದದ್ದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಅವರು ಮಾತನಾಡುತ್ತ ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ.. ಕಲಿಯಿರಿ. ಇಂಗ್ಲಿಷ್ ನಲ್ಲಿ ಉತ್ತೀರ್ಣರಾದರೆ ಉಳಿದ ಭಾಷೆಗಳು ಸುಲಭವಾಗಿ ಉತ್ತೀರ್ಣರಾಗುತ್ತಾರೆ. ಉನ್ನತ ಶಿಕ್ಷಣದಲ್ಲಿ ಇಂಗ್ಲಿಷ್ ಭಾಷೆ ಬಹಳ ಪ್ರಮುಖವಾದದ್ದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ನರಸಿಂಹ, ಡಾ. ನಿಂಗಪ್ಪ, ವಿರೂಪಾಕ್ಷಪ್ಪ, ಶಿವಪ್ರಸಾದ್ ಹಾದಿಮನಿ, ಅನಿಲ ಪವಾರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಯ್ಯ ಪರ್ವೀನ್ ಸ್ವಾಗತಿಸಿದರು. ಅಲ್ಫಿಯ ತಾಜ್ ನಿರೂಪಿಸಿ ವಂದಿಸಿದರು.
- ಕರುನಾಡ ಕಂದ ಪತ್ರಿಕೆ


















