ಸಿರುಗುಪ್ಪ- ಗುಣಮಟ್ಟದ ರಸ್ತೆ ಕಾಮಗಾರಿ ಕೈಗೊಳ್ಳಬೇಕು ಎಂದು ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ ಅವರು ಸೂಚನೆ ನೀಡಿದರು
ಕರ್ನಾಟಕ ಸರ್ಕಾರ ಲೋಕ ಉಪಯೋಗಿ ಇಲಾಖೆ 2025- 26ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮೈಕ್ರೋ ಯೋಜನೆಗಳ ಸಿಎಂ ಡಿ ಕ್ಯೂ ಅಡಿಯಲ್ಲಿ ಮಂಜೂರಾದ ಸಿರುಗುಪ್ಪ ತಾಲೂಕು ಇಟ್ಟಿಗೆಹಾಳು ಗ್ರಾಮದ ಸತ್ಯಪ್ಪ ಮನೆಯಿಂದ ಆದೋನಿ ಸಿರುಗುಪ್ಪ ರಸ್ತೆಯವರಿಗೆ 60 ಲಕ್ಷ ರೂ, ವೆಚ್ಚದ ಒಳಚರಂಡಿ ನಿರ್ಮಾಣ ಕಾಮಗಾರಿಗೆ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ ಅವರು ಅಡಿಗಲ್ಲು ಹಾಕಿ ನೆರವೇರಿಸಿದರು.
ಈ ವೇಳೆಯಲ್ಲಿ ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷರು ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಎನ್. ಕರಿಬಸಪ್ಪ, ಲೋಕ ಉಪಯೋಗಿ ಇಲಾಖೆಯ ಎ ಇ ಇ ಚನ್ನನ ಗೌಡ, ಎ ಇ ಗಳಾದ ಮೊಹಮ್ಮದ್ ಪಾಷ, ಗಂಗಪ್ಪ, ರಾಕೇಶ್, ಮುಖಂಡರಾದ ಎಂ. ಗೋಪಾಲ ರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ, ಹುಸೇನ್ ಬಾಷಾ, ಹುಸೇನಪ್ಪ, ನಾಗರಹಾಳು ನಾಗರಾಜ, ಹೆಚ್.ಗಣೇಶ್, ಬಿ.ಉಮೇಶ್ ಗೌಡ, ಪವನ್ ದೇಸಾಯಿ, ಇಟ್ಟಿಗೆಹಾಳು ಗ್ರಾಮದ ಗಣ್ಯರು ಸಾರ್ವಜನಿಕರು ಇದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ



















