ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕನಕಗಿರಿ ಉತ್ಸವದಲ್ಲಿ ಅಂಗವಿಕಲರಿಗೂ ಅವಕಾಶ ಕಲ್ಪಿಸಿಕೊಡಿ: ಗುಡಿಕೋಟಿ

ಗಂಗಾವತಿ: ಮೇ 16 ಮತ್ತು 17 ರಂದು ಕನಕಗಿರಿಯಲ್ಲಿ ನಡೆಯುವ ಇತಿಹಾಸ ಪ್ರಸಿದ್ದ ಕನಕಗಿರಿ ಉತ್ಸವದಲ್ಲಿ ಎಲ್ಲರಂತೆ ಅಂಗವಿಕಲರಿಗೂ ಸಮಾನ ಅವಕಾಶ ಕಲ್ಪಿಸಿಕೊಡಿ ಎಂದು ಕರವೇ (ಪ್ರವಿಣಕುಮಾರ ಶೆಟ್ಟಿ ಬಣ) ಅಂಗವಿಕಲರ ಕ್ಷೇತ್ರದ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿ ವಿನಂತಿಸಿದ್ದಾರೆ.
ಅಂಗವಿಕಲರು ಕೂಡಾ ಸಾಹಿತ್ಯಿಕ, ಸಾಮಾಜಿಕ, ಶೈಕ್ಷಣಿಕ, ಕ್ರೀಡೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಸಾಧನೆ ಮಾಡಿದ್ದಾರೆ. ಆದರೆ ಅವರಿಗೆ ಗೌರವಿತ ಬದುಕು ಕನಸಾಗಿಯೇ ಉಳಿದಿದೆ. ನಮಗೆ ಈ ಉತ್ಸವದಲ್ಲಿ ಭಾಗವಹಿಸಲು ಹಾಗೂ ಉತ್ಸವ ನೋಡಲು ಪ್ರತ್ಯೇಕ ವ್ಯವಸ್ಥೆ ಕಲ್ಲಿಸಬೇಕು. ಸರಕಾರ ನಮಗೆ ಶೇ 5 ರಷ್ಟು ಮಿಸಲನ್ನು ಕೊಟ್ಟಿದ್ದರೂ ಸಹ ಇಂತಹ ಉತ್ಸವ, ನಾಡಹಬ್ಬ, ನುಡಿ ಹಬ್ಬ, ಸಮ್ಮೇಳನ, ಸಮಾವೇಶಗಳಲ್ಲಿ ನಮ್ಮನ್ನು ಕಡೆಗಣಿಸುತ್ತಿರುವುದು ನೋವಿನ ಸಂಗತಿಯಾಗಿದೆ. ಅಲ್ಲದೇ ಈ ಬಾರಿಯ ಕನಕಗಿರಿ ಉತ್ಸವದಲ್ಲಿ ಹೆಲಿಕ್ಯಾಪ್ಟರ್‌ ಮೂಲಕ ಕನಕಗಿರಿಯ ಜಾಯರೈಡ್‌ ಎಂಬ ಹೆಸರಿನಲ್ಲಿ ಪ್ರಯಾಣದ ಸೌಲಭ್ಯ ಕಲ್ಪಿಸಿ ಅಂಜನಾದ್ರಿ ಬೆಟ್ಟ, ಪಂಪಾಸರೋವರ, ಹಂಪಿ, ನವ ಬೃಂದಾವನ ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಈ ವೀಕ್ಷಣೆಗೆ ಪ್ರತಿಯೊಬ್ಬರಿಗೆ ರೂ. 3649/- ಗಳನ್ನು ನಿಗದಿ ಮಾಡಲಾಗಿರುತ್ತದೆ. ಅಂಗವಿಕಲರಿಗೂ ಸಹ ಎಲ್ಲರಂತೆ ಹೆಲಿಕ್ಯಾಪ್ಟರ್‌ ನಲ್ಲಿ ಸುತ್ತಾಡಬೇಕೆಂಬ ಬಯಕೆ ಇದ್ದು, ಅವಕಾಶ ಸಿಗುತ್ತಿಲ್ಲ. ಈ ಬಾರಿಯ ಕನಕಗಿರಿಯ ಜಾಯರೈಡ್‌ ನಲ್ಲಿ ಅಂಗವಿಕರಿಗೆ ಹೆಲಿಕ್ಯಾಪ್ಟರ್‌ ಪ್ರಯಾಣದ ದರದಲ್ಲಿ ರಿಯಾಯಿತಿ ನೀಡಿ ಅವಕಾಶ ಕಲ್ಪಿಸಿಕೊಡಬೇಕೆಂದು ಸರ್ಕಾರಕ್ಕೆ ಹಾಗೂ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಒತ್ತಾಯಿಸಿದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!