ರಸ್ತೆಯ ಬದಿಯಲಿ ಹರಡಿಕೊಂಡಿತ್ತು ಅನಾಥವಾಗಿ
ಎನ್ನ ಪಾದದಡಿ ಸಿಲುಕಿ ನಲುಗಿತ್ತು ಆಕಸ್ಮಿಕವಾಗಿ
ವೈಭವೀ ಶ್ವೇತ ಪುಷ್ಪಗಳಿತ್ತು ಬಳ್ಳಿಯಲಿ ಹೇರಳವಾಗಿ
ಮೆಲ್ಲನುಸುರಿದವು ಚಿತ್ತಾರದಿ ಪರಿಚಯಿಸು ನಮಗಾಗಿ
ಹಗುರದಿ ಚಿವುಟಿ ಜೋಡಿಸಿದೆ ಎನ್ನ ಕಟ್ಟೆಯಲಿ
ಪಚ್ಚೆಬಳ್ಳಿ ಮೊಗ್ಗುಗಳ ಸಹಿತ ಸೃಜನಶೀಲತೆಯಲಿ
ಆನಂದಿಸಿ ನಿಸರ್ಗ ಕೊಡುಗೆಯ ಆಸ್ವಾದಿಸುತಲಿ
ಓದುಗರಿಗೆ ಹೆಣೆದೆನು ಕಾವ್ಯವ ಉದಯರಾಗದಲಿ
- ಲಲಿತಾ ಕೆ ಆಚಾರ್ ಬೆಂಗಳೂರು




















