ನಾಗನೂರು ಅಂಗನವಾಡಿ ಕಾರ್ಯಕರ್ತೆ ನೇಮಕಾತಿ ಪ್ರಕರಣ ವಿವಾದ
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಅಂಗನವಾಡಿಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ 2025 ರ ಮಾರ್ಚ್ ಏಳನೇ ತಾರೀಕಿನಂದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿತ್ತು, ಇದರಂತೆಯೇ ಮುಂಡಗೋಡ ತಾಲೂಕಿನ ನಾಗನೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಒಟ್ಟು ಹನ್ನೊಂದು ಅರ್ಜಿಗಳು ಸ್ವೀಕೃತವಾಗಿದ್ದವು, ಹೆಚ್ಚಿನ ಅಂಕ ಗಳಿಕೆಯ ಆಧಾರದ ಮೇಲೆ ತಾಲೂಕು ಆಯ್ಕೆ ಸಮಿತಿಯ ಹಾಗೂ ಜಿಲ್ಲಾ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇಲೆ ಜಯಂತಿ ಸಿದ್ದಪ್ಪ ವಡ್ಡರ ಎಂಬುವವರಿಗೆ ನೇಮಕಾತಿ ಆದೇಶ ನೀಡಲಾಗಿತ್ತು.
ಜಯಂತಿ ಅವರು ಸ್ಥಳೀಯತೆ ಹೊಂದಿರದ ಕಾರಣ ಅವರ ನೇಮಕಾತಿ ಅನರ್ಹ ಮಾಡಿ ನನ್ನನ್ನು ಆಯ್ಕೆಗೆ ಪರಿಗಣಿಸುವಂತೆ ಚೈತ್ರಾ ಎನ್. ವಡ್ಡರ ಎಂಬುವವರು ಧಾರವಾಡ ಹೈಕೋರ್ಟ್ ಸಂಚಾರಿ ಪೀಠದಲ್ಲಿ ರಿಟ್ ಅರ್ಜಿ ದಾಖಲು ಮಾಡಿದ್ದರು. ನಂತರ ಜಯಂತಿ ಅವರು ಕೂಡ ನ್ಯಾಯಾಲಯ ಮೊರೆ ಹೋಗಿ ರಿಟ್ ಅರ್ಜಿ ದಾಖಲು ಮಾಡಿದ್ದರು, ನ್ಯಾಯಾಲಯ ಅಂತಿಮ ಪ್ರಕ್ರಿಯೆ ಮುಗಿಯುವವರೆಗೂ ನೇಮಕಾತಿ ರದ್ದು ಮಾಡಬಾರದು ಎಂದು ಮಧ್ಯಂತರ ಆದೇಶ ನೀಡಿತ್ತು.
ಬಳಿಕ ದಾಖಲೆಗಳ ಸಂಪೂರ್ಣ ವಿಚಾರಣೆ ನಡೆಸಿದ ಘನ ಉಚ್ಚ ನ್ಯಾಯಾಲಯ ಜಯಂತಿ ಸಿದ್ದಪ್ಪ ವಡ್ಡರ ಇವರ ಆಯ್ಕೆಯನ್ನು ಅಸಿಂಧುಗೊಳಿಸಿ, ಅರ್ಹ ಅಭ್ಯರ್ಥಿಯಾಗಿರುವ ಚೈತ್ರಾ ಶಂಭಣ್ಣ ವಡ್ಡರ ಅವರನ್ನು ನೇಮಕಾತಿಗೆ ಪರಿಗಣಿಸಬೇಕೆಂದು ಹಾಗೂ ಆದೇಶ ನೀಡಿದ ಎಂಟು ವಾರದೊಳಗೆ ಪ್ರಕ್ರಿಯೆ ಮುಗಿಸುವಂತೆ ಆದೇಶ ಮಾಡಿದೆ.
BOX
ಈ ಹಿಂದಿನ ಸಿಡಿಪಿಒ ಯಿಂದ ಕರ್ತವ್ಯಲೋಪ :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಇಲಾಖೆಯ ಈ ಹಿಂದಿನ ಸಿಡಿಪಿಓ ಅವರ ಕರ್ತವ್ಯ ಲೋಪ ಹಾಗೂ ನಿಷ್ಕಾಳಜಿಯಿಂದ ಅರ್ಹರಿಗೆ ಅನ್ಯಾಯವಾಗಿತ್ತು, ಈ ಕುರಿತು ” ಕರುನಾಡ ಕಂದ ಪತ್ರಿಕೆ ” ಸುದ್ದಿ ಬೆನ್ನಲ್ಲೇ ಸಿಡಿಪಿಒ ಅವರ ದಿಢೀರ್ ವರ್ಗಾವಣೆ ಕೂಡಾ ಆಗಿತ್ತು “.
BOX NEWS
ಸಲ್ಲಿಕೆಯಾದ ದಾಖಲೆಗಳು ನೈಜತೆಯಿಂದ ಕೂಡಿಲ್ಲ ಹಾಗೂ ನೇಮಕಾತಿಯಲ್ಲಿ ಅಕ್ರಮವಾಗಿದೆ ಎಂದು ಕರುನಾಡ ಕಂದ ಪತ್ರಿಕೆ ಈ ಕುರಿತು ಸಂಕ್ಷಿಪ್ತ ವರದಿ ಮಾಡಿತ್ತು ಹಾಗೂ ವರದಿ ಸಹಾಯದಿಂದ ಅವಕಾಶ ವಂಚಿತ ಅಭ್ಯರ್ಥಿ ನ್ಯಾಯಾಲಯಕ್ಕೆ ಹೋಗಲು ಸಹಕಾರಿಯಾಗಿತ್ತು. ಸತತ ಸುದ್ದಿಗಳ ಬಳಿಕ ವಿವಾದದ ನೈಜತೆ ತೆರೆದಿಟ್ಟಿದ್ದಕ್ಕೆ ನ್ಯಾಯಾಲಯದ ಆದೇಶ ಮೂಲಕ ಹುದ್ದೆ ಗಿಟ್ಟಿಸಿಕೊಂಡ ಚೈತ್ರಾ ಎನ್. ವಡ್ಡರ ಅವರು ಕರುನಾಡ ಕಂದ ಪತ್ರಿಕೆಗೆ ಧನ್ಯವಾದ ತಿಳಿಸಿ, ಕೃತಜ್ಞತೆ ಮೆರೆದಿದ್ದಾರೆ.
ವರದಿ ಶಿವರಾಜ್ ಶಿರಾಲಿ




















