ಕಂಡೆನಿಂದು ಲೋಹಿತ ವರ್ಣದ ಪುಟ್ಟ ಪುಟ್ಟ ಹಣ್ಣು
ನೆಲದಿ ಉದುರಿ ಹರಡಿದ್ದರ ಮೇಲೆ ಬಿತ್ತೆನ್ನ ಕಣ್ಣು
ಪಕ್ಕದಲ್ಲಿ ತೂಗಿತ್ತು ಪುಟ್ಟ ಗಿಡದಿ ತುಂಬೆ ಹೂಗಳು
ತಾಗಿ ನಿಂತು ನಗುತಲಿತ್ತು ದೊಡ್ಡಪತ್ರೆ ಎಲೆಗಳು
ಹೆಕ್ಕಿ ಗೂಡಿಗೆ ಹಿಂದಿರುಗಲು ಕಾದಿತ್ತು ಮೂಸಂಬಿ ಸಿಪ್ಪೆಯು
ಕ್ರಿಯಾಶೀಲತೆಯಲಿ ಒಟ್ಟು ಸೇರಿಸಲು ಚಿತ್ತಾರ ಕವಿತೆಯು
ಕಲಾ ಪ್ರೋತ್ಸಾಹಕರಿಗಿದುವೆ ಉದಯರಾಗದ ಹೊನಲು
ಆಸ್ವಾದಿಸಲು ಬರುತಿದೆ ತಮ್ಮಲ್ಲಿಗೆ ಬೀರಲು ಘಮಲು
- ಲಲಿತಾ ಕೆ ಆಚಾರ್, ಬೆಂಗಳೂರು




















