ನಂಜನಗೂಡು: ಪಟ್ಟಣದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹಾಗೂ ಆಂಗ್ಲ ಮಾಧ್ಯಮ ದಳವಾಯಿ ಶಾಲೆಯಲ್ಲಿ ಅರ್ಥಪೂರ್ಣವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಬಡ್ತಿ ಮುಖ್ಯ ಶಿಕ್ಷಕರಾದ ಲೀಲಾವತಿ ಮತ್ತು ದೈಹಿಕ ಶಿಕ್ಷಕರಾದ ನಾಗೇಶ್ ರವರು ಹಸಿರು ಗಿಡವನ್ನು ನೆಟ್ಟು ನೀರು ಉಣಿಸುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.
ಶಾಲೆ ಆವರಣದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನೆಟ್ಟರು. ಹಸಿರು ಗಿಡವನ್ನು ಪ್ರತಿಯೊಬ್ಬರು ಮನೆಯಲ್ಲಿ ಒಂದೊಂದು ಗಿಡವನ್ನು ನೆಟ್ಟು ಪ್ರಕೃತಿಯನ್ನು ಗೌರವಿಸಬೇಕೆಂದರು. ಇಂದು ನಾವು ಕಾಡನ್ನು ನಾಶ ಮಾಡಿ ಸರಿಯಾಗಿ ಮಳೆ ಇಲ್ಲದೆ ಕೊರಗುತ್ತಿದ್ದೇವೆ ಆದ್ದರಿಂದ ಮುಂದಿನ ಪೀಳಿಗೆಗೆ ತುಂಬಾ ಕಷ್ಟವಾಗಲಿದ್ದು ಹಸಿರು ಗಿಡಗಳನ್ನು, ಕಾಡನ್ನು ಪೋಷಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಮನೆಗೊಂದು ಮರ, ಊರಿಗೊಂದು ವನ ಎಂಬ ಗಾದೆಯಂತೆ ನಡೆದುಕೊಳ್ಳಬೇಕೆಂದರು. ಶಾಲಾ ಮಕ್ಕಳು ಕೂಡ ನಿಮ್ಮ ಮನೆಯಲ್ಲಿ ಇಂದಿನ ದಿನವೇ ಒಂದೊಂದು ಗಿಡವನ್ನು ನೆಟ್ಟು ಪೋಷಿಸಬೇಕೆಂದರು. ಈ ಸಂದರ್ಭದಲ್ಲಿ ಸಹಶಿಕ್ಷಕರಾದ ಸನ್ಮತಿ, ಮಂಜುನಾಥ್, ಮಧು, ಸುನಿಲ್, ಸತ್ಯನಾರಾಯಣ, ಮಂಜುಳ, ಕವಿತಾ, ಶಿಲ್ಪ ಶ್ರೀ, ರೇಣುಕಾ ಮುಂತಾದ ಶಿಕ್ಷಕರು, ಶಾಲೆ ವಿದ್ಯಾರ್ಥಿಗಳು ಹಾಜರಿದ್ದರು.
- ಕರುನಾಡ ಕಂದ ಸುದ್ದಿ




















