ಇಲ್ಲಿವೆ ನಡುವಲಿ ಹಣ್ಣಾಗಿರುವ ತೊಂಡೆಕಾಯಿ ಗಾಲಿಗಳು
ನೆನಪಾಯ್ತು ಅಮ್ಮಾಅಡುತಿದ್ದ ಮನೆ ಮದ್ದಿನ ಮಾತುಗಳು
ದೇಹದ ಸೋಂಕಿಗೆ ತಿನ್ನಲು ಕೊಡುತ್ತಿದ್ದ ಅಂದಿನ ಕ್ಷಣಗಳು
ಕಾಣುತಿಹೆನು ಈ ಕಲೆಯಲಿ ನಮ್ಮಮ್ಮನ ಹಾರೈಕೆಗಳು
ಜೊತೆಯಾಗಿವೆ ಮಹಾದೇವನ ನೆಚ್ಚಿನ ತುಂಬೆ ಹೂಗಳು
ನಡು ನಡುವಲಿ ನಲಿದಿವೆ ಸಂಜೆ ಮಲ್ಲಿಗೆಗಳ ಮೊಗ್ಗುಗಳು
ದೃಷ್ಟಿ ತಾಗದಿರಲು ಅಂಚಿನಲಿ ಕಾದಿವೆ ಬೆಳ್ಳುಳ್ಳಿ ಎಸಳುಗಳು
ಕಾವ್ಯ ಚಿತ್ತಾರದ ಸುಮನಗಳಿಗಿದುವೆ ಸುಪ್ರಭಾತದ ನಮನಗಳು
- ಲಲಿತಾ ಕೆ ಆಚಾರ್, ಬೆಂಗಳೂರು




















