ಕೊಪ್ಪಳ ಜಿಲ್ಲೆಯ ಗಂಗಾವತಿ,ಕಾರಟಗಿ,ಕನಕಗಿರಿ ತಾಲೂಕಿನ ರ.ಬ.ವಿ.ಕೊಪ್ಪಳ ಜಿಲ್ಲೆಯ,ಬಳ್ಳಾರಿ ಹಾಲು ಒಕ್ಕೂಟದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಗುಜರಾತಿನಲ್ಲಿ “ನ್ಯಾಷನಲ್ ಡೇರಿ ಡೆವಲಪ್ಮೆಂಟ್ ಬೋರ್ಡ್”ತರಬೇತಿ ಸೋಮವಾರ ಮತ್ತು ಮಂಗಳವಾರ ಹೈನುಗಾರಿಕೆ ತರಬೇತಿ ತಜ್ಞರಾದ ಪ್ರಕಾಶ್ ರವರಿಂದ ಹಾಲು ಉತ್ಪಾದನೆಯ ಮಾಹಿತಿ,ಸಹಕಾರ ಸಂಘದ ಅಧ್ಯಕ್ಷರು/ನಿರ್ದೇಶಕರು ಹಾಗೂ ಸರ್ವ ಸದಸ್ಯರು ಸಂಘದ ಆಡಳಿತದ ನಿರ್ವಹಣೆ ಬಗ್ಗೆ ರಾಸುಗಳ ಆರೋಗ್ಯ ಬಗ್ಗೆ ಕಾಳಜಿ,ಹಾಲಿನ ಗುಣಮಟ್ಟ,ಹಾಲು ಸಂಗ್ರಹಣೆ ಬಗ್ಗೆ,ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಬಳ್ಳಾರಿ ಒಕ್ಕೂಟದ ಅಧಿಕಾರಿಗಳಾದ ದೇವೇಂದ್ರಪ್ಪ,ಜಿ.ಐ.ಪಡಸಲಗಿ, ನಾರಾಯಣ.ಎ.,ಗಂಗಾವತಿ ತಾಲೂಕಿನ ಹಾಲು ಉತ್ಪಾದಕರ ಸಂಘದ ಸದಸ್ಯರು ಭಾಗಿಯಾಗಿದ್ದರು.




















