ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಆರೋಗ್ಯಕ್ಕೆ ಹಾಲು ಎಷ್ಟು ಮುಖ್ಯವೋ,ಪ್ರಕೃತಿ ಅಷ್ಟೇ ಮುಖ್ಯ:ಡಾಕ್ಟರ್ ಗಂಗಾಧರ್

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಾಲು ಒಕ್ಕೂಟ ಕಚೇರಿಯಲ್ಲಿ ಇಂದು ತಾಲೂಕಿನ ಸಹಕಾರ ಸಂಘಗಳ ಕಾರ್ಯದರ್ಶಿಗಳ ಸಮ್ಮುಖದಲ್ಲಿ ವಿಶ್ವ ಹಾಲು ದಿನಾಚರಣೆಯನ್ನು ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ತಾಲೂಕು ಅಧಿಕಾರಿಗಳಾದ ಗವಿಸಿದ್ದಪ್ಪ ಅವರು ಸಭೆಯ ಸ್ವಾಗತ ಕೋರುವ ಮೂಲಕ ಮಾತನಾಡಿ, ವಿಶ್ವ ಹಾಲು ದಿನವನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ೨೦೦೧ರಿಂದ ಪ್ರತಿವರ್ಷ ಒಂದರಂದು ಆಚರಿಸುತ್ತಿದೆ ಇದರ ಉದ್ದೇಶ ಹಾಲು ಮತ್ತು ಹೈನುಗಾರಿಕೆಯನ್ನು,ಆದರ ಮಹತ್ವವನ್ನು ವಿಶ್ವದಲ್ಲೆಡೆ ಪಸರಿಸುವುದೇ ಆಗಿದೆ.
ಹಾಲು ಪೌಷ್ಟಿಕ ಆಹಾರವಾಗಿದ್ದು,ಸಾರ್ವಜನಿಕರಲ್ಲಿ
ಹಾಗೂ ಮಕ್ಕಳಲ್ಲಿ ಹಾಲು ಸರ್ವೋತ್ತಮ ಆಹಾರ ಎನ್ನುವ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ವಿಶ್ವ ಹಾಲು ದಿನವನ್ನು ಆಚರಿಸುತ್ತಿದ್ದೇವೆ ಎಂದು ತಾಲೂಕು ಅಧಿಕಾರಿಗಳಾದ ಗವಿಸಿದ್ದಪ್ಪ ತಿಳಿಸಿದರು.ನಂತರ ಬಳ್ಳಾರಿ ಒಕ್ಕೂಟದ ಜಿಲ್ಲಾ ಉಪ ವ್ಯವಸ್ಥಾಪಕರಾದ ಡಾಕ್ಟರ್ ಗಂಗಾಧರ್ ಮಾತನಾಡಿ ರಾಜ್ಯದ ಎಲ್ಲಾ ರೈತರಿಗೂ ಎಲ್ಲಾ ಕಾಲಗಳಲ್ಲಿಯೂ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಹೈನೋಧ್ಯಮದಿಂದ ಆಗುತ್ತಿದೆ. ಹಾಲಿನಲ್ಲಿ ಮನುಷ್ಯನ ದೇಹಕ್ಕೆ ಅತ್ಯಗತ್ಯವಾಗಿ ಬೇಕಾದ ಜೀವಸತ್ವಗಳು ಮಿಟಮಿನ್,ಪ್ರೋಟೀನ್ ಗಳಿವೆ.ಹಾಲು Vitamin D ಯಿಂದ ಶ್ರೀಮಂತವಾಗಿರುತ್ತದೆ.ಕ್ಯಾನ್ಸರ್ ಹತ್ತಿಕ್ಕುವ ಸಾಮರ್ಥ್ಯ ಹೊಂದಿರುವ ಸಂಗತಿಗಳಲ್ಲಿ Vitamin D ಸಹ ಒಂದಾಗಿದೆ.
ಕರ್ನಾಟಕ ಕ್ಷೀರ ಬ್ರಹ್ಮ ಎಂದೆ ಹೆಸರು ಗಳಿಸಿದೆ ಎಂದು ತಿಳಿಸಿದರು.ಇದರ ಜೊತೆ ಆರೋಗ್ಯಕ್ಕೆ ಹಾಲು ಎಷ್ಟು ಮುಖ್ಯವೋ,ಆರೋಗ್ಯಕ್ಕೆ ಪರಿಸರ ಮುಖ್ಯ,ಪ್ರಕೃತಿಯ ಮಡಿಲಲ್ಲಿ ನಾವು ಇಂದು ಬೆಳೆತ್ತಿದ್ದೇವೆ,ಅದರಿಂದ ಪ್ರತಿಯೊಬ್ಬರೂ ಪರಿಸರ ರಕ್ಷ ಮಾಡಬೇಕು ಎಂದು ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ಸಸಿಗಳನ್ನು ನೆಡಿಸಿದರು.
ಎ.ನಾರಾಯಣ ಮಾತನಾಡಿ ಸಮಾಜದ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ನಡೆಸಲು ಹಾಲು ಸೇವನೆ ಮಾಡುವುದು ಬಹಳ ಮುಖ್ಯ ಮಕ್ಕಳಿಂದ ವೃದ್ಧರವರಿಗೂ ಹಾಲು ಉತ್ಕೃಷ್ಠವಾದ ಪೌಷ್ಠಿಕ ಆಹಾರವಾಗಿದೆ ಎಂದರು.ಈ ಸಂದರ್ಭದಲ್ಲಿ ಗಂಗಾವತಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳು ಹಾಗೂ ಅಧಿಕಾರಿ ವರ್ಗದವರು ಸಹಾಯಕರು ಭಾಗಿಯಾಗಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ