ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಪುರ ಗ್ರಾಮದ ಶಿವರಾತ್ರಿ ರಾಜೇಂದ್ರ ಭವನದಲ್ಲಿ ನಡೆದ 205ನೇ ವರ್ಷದ ಭೀಮ ಕೊರೆಂಗವ್ ವಿಜಯ ದಿವಸ ಹಾಗೂ ವಿಚಾರ ಸಂಕಿರಣದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕರು ಮಾವಳ್ಳಿ ಶಂಕರ್ ರವರು ಮಾತನಾಡಿದರು ದಲಿತ ಯುವಕ ಯುವತಿಯರು ಹೆಚ್ಚು ಹೆಚ್ಚು ಶಿಕ್ಷಣ ಪಡೆದು ನಮ್ಮ ಪೂರ್ವಿಕರ ಇತಿಹಾಸ ತಿಳಿದುಕೊಳ್ಳಬೇಕು ತಿಳಿಸಬೇಕು
ಬಾಬಾ ಸಾಹೇಬರು ಇಡೀ ಭಾರತೀಯ ಸಮಾಜದ ಬದಲಾವಣೆಗೆ ತಮ್ಮ ಬದುಕನ್ನು ಮುಡುಪಿಟ್ಟಿದ್ದರು. ಅವರ ಹೋರಾಟವನ್ನು ಮುನ್ನಡೆಸುವ ವಾರಸುದಾರರು ನಾವಾಗಬೇಕು ಬಾಬಾಸಾಹೇಬರು ತನ್ನ ಜನಕ್ಕಾಗಿ ರಕ್ತ ಮತ್ತು ಬೆವರು ಸುರಿಸಿ ಪ್ರಾಣ ತ್ಯಾಗ ಮಾಡಿದ್ದಾರೆ ಅವರ ಪ್ರತಿಯೊಂದು ವಿಚಾರಗಳನ್ನು ನಾವುಗಳು ಅರ್ಥ ಮಾಡಿಕೊಂಡು ಸಾಗಬೇಕು
ಭಾರತದಲ್ಲಿ ಜಾತಿ ಅಸಮಾನತೆ, ತಾರತಮ್ಯ ಈಗಲೂ ಇದೆ ತಮಿಳುನಾಡು ರಾಜ್ಯದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ದಲಿತರಿಗೆ ದ್ವಜಾರೋಹಣ ಮಾಡಲು ಅವಕಾಶ ನೀಡದ ಪರಿಸ್ಥಿತಿಯಲ್ಲಿ ಇದ್ದಾರೆ. ಸ್ವತಂತ್ರ ಬಂದು 75 ವರ್ಷವಾದರೂ ದಲಿತರ ಮೇಲಿನ ಶೋಷಣೆ ಕೊನೆಯಾಗಿಲ್ಲ ಈ ಅಸಮಾನತೆ ಕೊನೆಗಾಣಿಸಲು
ತಂದೆ ಪೆರಿಯಾರ್ ಪೆರಿಯಾರ್,ಬಸವಣ್ಣ ಅಂಬೇಡ್ಕರ್ ರವರು ಬ್ರಾಹ್ಮಣ ವಾದಿಗಳ ವಿರುದ್ಧ,ಅಸಮಾನತೆ ವಿರುದ್ಧ,ತಾರತಮ್ಯದ ವಿರುದ್ಧ,ಸ್ವಾಭಿಮಾನಿ ಹೋರಾಟ ನಡೆಸಿದರು.
ಮುಚ್ಚಿ ಹೋಗಿದ್ದ ಕೋರೆಗಾವ್ ಇತಿಹಾಸವನ್ನು ಇಂಗ್ಲೆಂಡ್ ನಲ್ಲಿ ಹೋಗಿ ಅಧ್ಯಯನ ಮಾಡಿ ಬಾಬಾ ಸಾಹೇಬರು ನಮ್ಮ ಮುಂದೆ ಇಟ್ಟಿದ್ದಾರೆ. ಬಾಬಾಸಾಹೇಬರು ಪ್ರತಿ ವರ್ಷ ಜನವರಿ 1ರಂದು ಪ್ರಪಂಚದ ಯಾವುದೇ ಮೂಲೆಯಲ್ಲಿ ಇದ್ದರೂ ಕೂಡಾ ಮಹಾರಾಷ್ಟ್ರದ ಪೂನಾ ನಗರದಲ್ಲಿ ಬಳಿ ಇರುವ ಭೀಮ ನದಿಯ ದಂಡೆಯಲ್ಲಿ ಇರುವ ಭೀಮ ಕೊರೆಂಗವ್ ಗ್ರಾಮಕ್ಕೆ ಹೋಗಿ ಕೊರೆಂಗವ್ ಬಳಿ ನಡೆದ ಯುದ್ಧದಲ್ಲಿ ಹೋರಾಡಿ ಗೆದ್ದು ಪ್ರಾಣ ಬಿಟ್ಟ ವೀರ ಸೈನಿಕರಿಗೆ ಪೂಜೆ ಸಲ್ಲಿಸಲು ಹೋಗುತಿದ್ದರು ಹಾಗಾಗಿ ಬಾಬಾಸಾಹೇಬರ ಪ್ರತಿಯೊಂದು ವಿಚಾರಗಳನ್ನು ಅರ್ಥಸಿಕೊಂಡು ಸಾಗಬೇಕು
ರಾಮಾಪುರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆ ಅನಾವರಣಕ್ಕೆ ಸ್ಥಳ ನೀಡಿದವರಿಗೆ ಧನ್ಯವಾದಗಳು ತಿಳಿಸಿದರು
ಬಾಬಾ ಸಾಹಬ್ ಅಂಬೇಡ್ಕರ್ ರವರು ಇಡೀ ವಿಶ್ವವೇ ಮೆಚ್ಚುವಂತಹ ಉತ್ತಮ ಸಂವಿಧಾನವನ್ನೂ ಭಾರತಕ್ಕೆ ರಚನೆ ಮಾಡಿಕೊಟ್ಟಿದ್ದಾರೆ.ಇದು ಎಲ್ಲಾ ವರ್ಗದ ಜನರು ಶಿಕ್ಷಣ ಪಡೆಯಲು ಅನುಕೂಲವಾಗಿದೆ ಎಂದರು ಈ ವೇಳೆ ಮಾತನಾಡಿದ ಅಂಬೇಡ್ಕರ್ ವಾದಿ
ಶಿಕ್ಷಕ ಮಹದೇವ ಕುಮಾರ್ ಮಾತನಾಡಿ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾದರೆ ಪ್ರತಿಯೊಬ್ಬರೂ ಕೂಡಾ ಶಿಕ್ಷಣ ಪಡೆದುಕೊಳ್ಳಬೇಕು 28000 ಪೇಶ್ವೆಗಳನ್ನು ಐನೂರು ಜನ ಮಹಾ ಸೈನಿಕರು ಹೋರಾಡಿ ಜಯಗಳಿಸಿದ್ದರ ಸಂಕೇತವಾಗಿ ಇಂದು ಕೊರೆಗಾವ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು
ಈ ಸಂದರ್ಭದಲ್ಲಿ
ಸುಗತಪಾಲ ಬಂತೆ ದಲಿತ ಮೈಸೂರು ವಿಭಾಗ ಸಂಚಾಲಕ ಸಿದ್ದರಾಜು ಗ್ರಾಮಪಂಚಾಯತಿ ಅಧ್ಯಕ್ಷೆ ದ್ರಾಕ್ಷಾಯಣಿ, ಗುತ್ತಿಗೆದಾರರಾದ ಒಲೆ ಮಹದೇವ, ಪುಟ್ಟಸ್ವಾಮಿ, ಪತ್ರಕರ್ತ ನಿಂಪು ರಾಜೇಶ್, ಸ್ಥಳೀಯ ದಲಿತ ಮುಖಂಡರಾದ ವೀರಭದ್ರ,ಮುನಿಸ್ವಾಮಿ, ಮಾರ್ಟಳ್ಳಿ
ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರಮಲಿಂಗಮ್ ದಲಿತ ಮುಖಂಡ ಚಿರಂಜೀವಿ ಹಾಗೂ ಸುತ್ತ ಮುತ್ತಲಿನ ಗ್ರಾಮದ ಸಾರ್ವಜನಿಕರು ಹಾಜರಿದ್ದರು.
ವರದಿ-ಉಸ್ಮಾನ್ ಖಾನ್




















