
ಕೊಪ್ಪಳ : ಪತಂಜಲಿ ಯೋಗ ಶಿಕ್ಷಣ ಸಮಿತಿ ತುಂಗಭದ್ರಾ ವಲಯ ಕೊಪ್ಪಳ ಜಿಲ್ಲೆಯ ಕುಕನೂರ ಶಾಖೆ ಹಾಗೂ ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ಕುಕನೂರ ಇವರ ಸಹಯೋಗದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಶನಿವಾರದಂದು ನೆರವೇರಿಸಲಾಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಕೆ. ಆರ್. ಕುಲಕರಣಿ ನಿವೃತ್ತ ಪ್ರಾಚಾರ್ಯರು ವಿದ್ಯಾನಂದ ಗುರುಕುಲ ಯೋಗ ದಿನಾಚರಣೆ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿ
2015 ಜೂನ್ 21ರಂದು ಮೊದಲ ಬಾರಿಗೆ ಜಾರಿಗೆ ಬಂದಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವಾದ್ಯಂತ ಪ್ರತಿವರ್ಷ ಜೂನ್ 21ರಂದು ಆಚರಿಸಲಾಗುತ್ತದೆ. ಯೋಗವು ಬಹಳ ಹಳೆಯ ಅಭ್ಯಾಸವಾಗಿದ್ದು, ಪ್ರಾಚೀನ-ಪುರಾಣ ಕಾಲದಿಂದಲೂ ದೇಶದಲ್ಲಿ ಅನುಸರಿಸುತ್ತಾ ಬರಲಾಗಿದೆ.
ವಿಶ್ವಕ್ಕೆ ಕೊಟ್ಟ ಯೋಗ ನಿಧಿ, ಸಂಪತ್ತಾಗಿದೆ. ಯೋಗವನ್ನು ಮಾಡಲು ಯಾವುದೇ ಭೌತಿಕ ಸಂಪತ್ತು ಬೇಕಾಗಿಲ್ಲ, ಹಣ ಇದ್ದವರಷ್ಟೇ ಇದನ್ನು ಮಾಡಲು ಸಾಧ್ಯ, ಬಡವರು ಯೋಗ ಮಾಡಲು ಸಾಧ್ಯವಿಲ್ಲ ಅನ್ನುವುದಕ್ಕೆ ಏನು ಸಾಧ್ಯವಿಲ್ಲ ಎಲ್ಲರೂ ಯೋಗವನ್ನು ಮಾಡಿ ಉಚಿತವಾಗಿ ಆರೋಗ್ಯ ಸಂಪತ್ತನ್ನು ಪಡೆಯಬಹುದು. ಯೋಗ ಎನ್ನುವುದು ಯಾವ ಕೆಲಸವನ್ನು ಏಕಾಗ್ರತೆಯಿಂದ ಪರಾಶಕ್ತಿಯಿಂದ ಮೈ ಮರೆತು ಯಾವ ಕೆಲಸವನ್ನು ಮಾಡುತ್ತೇವೆಯೋ ಅದು ಯೋಗ, ಯೋಗವನ ಮಾಡುವುದರೊಂದಿಗೆ ರೋಗ ಮುಕ್ತರಾಗೋಣ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾದ ಡಾ. ಮಂಜುನಾಥ ವಕ್ಕಳದ ಚಿಕ್ಕ ಮಕ್ಕಳ ತಜ್ಞರು ಮಾತನಾಡಿ
ಇತ್ತಿಚಿನ ದಿನಗಳಲ್ಲಿ ವಿಶ್ವಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ಮತ್ತು ದೈಹಿಕ ಸೌಂದರ್ಯಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚಿನ ಕಲೆಯಾಗಿದೆ. ಭಾರತವು ಜಗತ್ತಿಗೆ ನೀಡಿದ ಒಂದು ದೊಡ್ಡ ಕೊಡುಗೆಯಾಗಿದೆ.
ಮನುಷ್ಯನಿಗೆ ಬಾಹ್ಯ ಸೌಂದರ್ಯ ಎಷ್ಟು ಮುಖ್ಯವೊ, ಆಂತರಿಕ ಸೌಂದರ್ಯವು ಅಷ್ಟೇ ಮುಖ್ಯವಾಗಿರುತ್ತದೆ. ಇವೆರಡನ್ನು ಚೆನ್ನಾಗಿ ಇಟ್ಟುಕೊಳ್ಳಲು ಯೋಗವು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರತಿ ನಿತ್ಯವು ಯೋಗ ಮಾಡುವುದರಿಂದ ಉತ್ತಮವಾದ ಆರೋಗ್ಯಕರ ಜೀವನವನ್ನು ನಡೆಸಬಹುದಾಗಿದೆ ಎಂದು ಮಾತನಾಡಿದರು.
ಪ್ರಾಸ್ತಾವಿಕ ನುಡಿಗಳನ್ನು ಚಿದಾನಂದ ಪತ್ತಾರ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಸಮಿತಿಯ ಸಂಚಾಲಕರು ಮಾತನಾಡಿ ಈಗಾಗಲೇ ಪ್ರತಿಯೊಬ್ಬರ ಮಾನಸಿಕ ಮತ್ತು ಆಧ್ಯಾತ್ಮಿಕ ಅನಾರೋಗ್ಯಗಳಿಂದ ಬಳಲುವಂತಹ ಪರಿಸ್ಥಿತಿ ಒದಗಿ ಬರುತ್ತಿದ್ದು ಯೋಗವನ್ನು ಮಾಡುವುದರೊಂದಿಗೆ ರೋಗ ಮುಕ್ತರಾಗಲು ಪ್ರತಿದಿನವೂ ಯೋಗ ಬ್ಯಾಸವನ್ನು ಮಾಡುವುದರೊಂದಿಗೆ ರೋಗ ಮುಕ್ತರಾಗಲು ಪ್ರಯತ್ನಿಸಬೇಕು. ಪ್ರತಿವರ್ಷ ಯೋಗದ ದಿನಾಚರಣೆಯು ಯೋಗ, ಧ್ಯಾನ, ಸಭೆಗಳು ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಸಿಸುವುದರ ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ. ಪ್ರತಿನಿತ್ಯವು ಯೋಗವನ ಮಾಡುವುದರೊಂದಿಗೆ ಆರೋಗ್ಯ ವೃದ್ಧಿ ಹೊಂದೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಶವಂತ ಜೈನ್ ಮಾತನಾಡಿ ಯೋಗದಿಂದ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ದೈನಂದಿನ ಜೀವನದಲ್ಲಿ ಅರಿವು ಮತ್ತು ಜವಾಬ್ದಾರಿಯ ಉನ್ನತ ಪ್ರಜ್ಞೆಯನ್ನು ಬೆಳೆಸುತ್ತದೆ. ಈ ಸಾವಧಾನತೆಯು ಆರೋಗ್ಯಕರ ಮತ್ತು ಹೆಚ್ಚು ಸುಸ್ಥಿರ ಜೀವನಶೈಲಿಯನ್ನು ಆಯ್ಕೆ ಮಾಡಲು ನಮಗೆ ಅನುವು ಮಾಡಿಕೊಡುತ್ತದೆ. ಯೋಗ ಪ್ರತಿಯೊಬ್ಬರಿಗೂ ಅವಶ್ಯ ಪ್ರತಿ ಒಬ್ಬರು ಯೋಗದೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಶಾಂತರಾಜ ಅಣ್ಣನವರು ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿಯ ಬೆಂಗಳೂರು ಪಶ್ಚಿಮ ನಗರ ರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಯೋಗ ವಿಧಾನಗಳನ್ನು ಪ್ರಸ್ತುತಪಡಿಸಿ ಮಾತನಾಡಿ ಯೋಗವು ನಮ್ಮ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆಯ ಏಕತೆಯನ್ನು ಸಾಕಾರಗೊಳಿಸುತ್ತದೆ ನಮ್ಮ ಆರೋಗ್ಯ ಮತ್ತು ನಮ್ಮ ಯೋಗಕ್ಷೇಮಕ್ಕೆ ಮೌಲ್ಯಯುತವಾದ ಸಮಗ್ರ ವಿಧಾನ. ಯೋಗವು ಕೇವಲ ವ್ಯಾಯಾಮದ ಬಗ್ಗೆ ಅಲ್ಲ; ಇದು ನಿಮ್ಮೊಂದಿಗೆ, ಪ್ರಪಂಚ ಮತ್ತು ಪ್ರಕೃತಿಯೊಂದಿಗೆ ಏಕತೆಯ ಅರ್ಥವನ್ನು ಕಂಡುಕೊಳ್ಳುವ ಒಂದು ಮಾರ್ಗವಾಗಿದೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಗವಿಸಿದ್ದಪ್ಪ ಕರಮಡಿ ಶ್ರೀ ಗವಿಸಿದ್ದೇಶ್ವರ ಶಾಲಾ ಆಡಳಿತ ಮಂಡಳಿ, ವಿದ್ಯಾಪತಿ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಶಿಕ್ಷಕರು,
ಡಾ. ಜಂಬಣ್ಣ ಅಂಗಡಿ, ಶಿವಯ್ಯ ಹಿರೇಮಠ,ಡಾ. ಶಕುಂತಲಾ ಅಂಗಡಿ, ಶಾರದಾ ಆರ್ಯರ, ವಂದನ ಹಿರೇಮಠ, ಗಿರಿಜಾ, ಲಕ್ಷ್ಮಣ ಕಾಳೆ, ಕಾಜಾಸಾಬ್ ಶಿಕ್ಷಕರು, ಸಿದ್ದು ಬಣ್ಣದಬಾವಿ, ಪ್ರಭುರಾಜ್ ವಕ್ಕಳದ, ಭಾಗ್ಯ ಹಿರೇಮಠ, ಯಲ್ಲಪ್ಪ ಹಳ್ಳದ, ಉಮಾ ಗುಡ್ಲಾನೂರು, ಕಾಳಮ್ಮ ಕಳ್ಳೆಮಠ, ಜಗದೀಶ್ ಜವಳಿ, ವೀರೇಶ್ ಪವಾಡಶೆಟ್ಟಿ, ಸುಮಾ ಓಜನಹಳ್ಳಿ, ಅಶೋಕ್ ವಕ್ಕಳದ, ಲಕ್ಷ್ಮಣ ಕಂಬಳಿ, ಮಂಜುನಾಥ ಗದುಗಿನ, ತಿಪ್ಪಣ್ಣ, ಹಾಗೂ ಯೋಗ ಶಿಬಿರಾರ್ಥಿಗಳು ಮತ್ತು ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇತರರು ಇದ್ದರು.
- ಕರುನಾಡ ಕಂದ



















