ಚಾಮರಾಜನಗರ :ಅನುಪಮ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಿನ್ನೆ ಚಾಮರಾಜನಗರದ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಟ್ರಸ್ಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಲವು ಸಾಧಕರಿಗೆ ಕರ್ನಾಟಕ ಕಲಾಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಶುಭ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾದ ಗುಂಡ್ಲುಪೇಟೆ ಕರ್ನಾಟಕ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ರವರ ಕನ್ನಡ, ನೆಲ, ಜಲ, ಭಾಷೆ ವಿಚಾರದಲ್ಲಿ ನಿರಂತರ ಸೇವೆಯನ್ನು ಗುರುತಿಸಿ ಆಯ್ಕೆಯಾಗಿದ್ದು ಇವರಿಗೆ ಗೌರವ ಸಲ್ಲಿಸಿದ ಅನುಪಮ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲಾ ಆತ್ಮೀಯ ಪದಾಧಿಕಾರಿಗಳಿಗೆ ಪ್ರಶಸ್ತಿ ಸ್ವೀಕರಿಸಿದ ಎ.ಅಬ್ದುಲ್ ಮಾಲಿಕ್ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಕಾವಲು ಪಡೆಯ ತಾಲ್ಲೂಕು ಗೌರವಾಧ್ಯಕ್ಷರಾದ ರಾಮೇಗೌಡ, ಸಂಚಾಲಕರಾದ ಮಿಮಿಕ್ರಿರಾಜು, ರವಿಕುಮಾರ್, ನಾಟಕ ಭಾರ್ಗವ ಕೆಂಪರಾಜು ಸೇರಿದಂತೆ ಗಣ್ಯರು ಹಾಜರಿದ್ದರು.
ವರದಿ ಗುಂಡ್ಲುಪೇಟೆ ಕುಮಾರ್



















