ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಲೌಕಿಕದಿಂದ ಅಲೌಕಿಕದ ಕಡೆನಡೆದ ವೀರ ವೀರಾಗಿಣಿ, ಪ್ರಥಮ ವಚನಕಾರ್ತಿ ಅಕ್ಕಮಹಾದೇವಿ ಜಯಂತಿ ಆಚರಣೆ.

ಕೊಪ್ಪಳ : ನಗರದ ಪ್ರವಾಸಿ ಮಂದಿರದಲ್ಲಿ, ಶಿವಶರಣೆ, ಅಕ್ಮಮಹಾದೇವಿಯ ಜಯಂತಿ, ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಶಿವಶರಣೆ, ಬಸವಶ್ರೀ ಸೋಮನಾಳ ಅವರು ಅತಿಥಿಗಳಾಗಿ ಭಾಗವಹಿಸಿ ಅಕ್ಕ ಮಹಾದೇವಿಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರು, ಸಾಹಿತಿಗಳೂ ಆದ ಶಿವಪ್ರಸಾದ್ ಹಾದಿಮನಿ ಅವರು, ಅಕ್ಕ ಮಹಾದೇವಿಯು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ ಗ್ರಾಮದಲ್ಲಿ ಸುಜ್ಞಾನಿ, ಮತ್ತು ನಿರ್ಮಲ, ದಂಪತಿಗಳ ಮಗಳಾಗಿ ಜನಿಸಿದಳು, ಯೌವನದಲ್ಲಿ, ತನ್ನ ಒಪ್ಪಿಗೆ ಇಲ್ಲದಿದ್ದರೂ, ತಂದೆ ತಾಯಿಯರಿಗೆ ಗೌರವ ಕೊಡುವ ಕಾರಣಕ್ಕೆ, ಮದುವೆ ಎಂಬ ಬಂಧನದಲ್ಲಿ ಸಿಲುಕಿ, ಕೌಶಿಕ ಮಹಾರಾಜನೊಡನೆ ವಿವಾಹವಾದರೂ ಕೆಲವು ಷರತ್ತುಗಳನ್ನು ಕೌಶಿಕ ಉಲ್ಲಂಘಿಸಿದ್ದಕ್ಕಾಗಿ, ಅರಮನೆಯನ್ನು, ವೈಭವವನ್ನು, ತೊರೆದು, ಚೆನ್ನಮಲ್ಲಕಾರ್ಜುನನೇ ತನ್ನ ಪತಿ ಎಂದು ಅವನನ್ನು ಹುಡುಕುತ್ತಾ ನಡೆದು, ಸಾಧನೆಯ ಶಿಖರವೇರಿದ, ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ಸಮಾಜದ ಏಳಿಗೆಗೆ ಕಾರಣಳಾಗಿ, ವಚನಕಾರ್ತಿಯಾಗಿ ಹೊರಹೊಮ್ಮಿದ ಪ್ರತಿಭಾನ್ವಿತ ಮಹಿಳೆ, ಅಕ್ಕಮಹಾದೇವಿ ಎಂದು ಅಕ್ಕ ಮಹಾದೇವಿಯ ಗುಣಗಾನ ಮಾಡಿದರು,
ತಾಲೂಕಾ ಚು.ಸಾ.ಪ ಅಧ್ಯಕ್ಷ, ಮೈಲಾರಪ್ಪ, ಉಂಕಿ, ಅವರು ಮಾತನಾಡುತ್ತಾ, ಸಮಾಜದ
ಓರೆ ಕೋರೆಗಳನ್ನು ತಿದ್ದುವಲ್ಲಿ, ಅಕ್ಕಮಹಾದೇವಿಯ ಪಾತ್ರ ಬಹಳ ದೊಡ್ಡದು, ಎಂದರು.
ಮತ್ತೊಬ್ಬ ಕನ್ನಡ ಉಪನ್ಯಾಸಕರಾದ ಡಾ. ಮಹಾಂತೇಶ ನೆಲಾಗಣಿಯವರು ” ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ, ಅಂಜಿದೊಡೆಂತಯ್ಯ,”ಎಂಬ ಅಕ್ಕ ಮಹಾದೇವಿಯ ಪ್ರಸಿದ್ಧ ವಚನವನ್ನು ಪ್ರಸ್ತಾಪಿಸಿ ಮಾತಾಡಿದರು.
ಅಧ್ಯಕ್ಷತೆಯನ್ನು ವಹಿಸಿದ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರುದ್ರಪ್ಪ ಭಂಡಾರಿ, ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮವನ್ನು ಡಾ. ಮಹಾಂತೇಶ ನೆಲಾಗಣಿಯವರು ನಿರೂಪಿಸಿ, ವಂದಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!