ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತಾಲೂಕು ಕಛೇರಿಯಲ್ಲಿ ಜಗಜ್ಯೋತಿ ಬಸವಣ್ಣನವರ ಜಯಂತಿ ಅಚರಣೆ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಕಛೇರಿಯ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಪಂಪಾಪತಿ ಇವರು ಮಾತನಾಡಿ ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಮನುಜನ ಏಳಿಗೆಗೆ ಬೇಕಾದ ಏಳು ನುಡಿಗಳನ್ನು ತಿಳಿಸಿದ್ದಾರೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಅಳಿಯಲುಬೇಡ ಎಂದು ತಿಳಿಸುತ್ತಾ, ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ ಎಂದು ಪ್ರತಿಯೊಬ್ಬ ಮನುಷ್ಯನು ತನ್ನನ್ನು ತಾನು ಅರಿತು ನಡೆಯಲು ಮಾರ್ಗದರ್ಶನವನ್ನು ನೀಡಿದ್ದಾರೆ. ಹೀಗಾಗಿ ಬಸವಣ್ಣನವರು ವ್ಯಕ್ತಿತ್ವ ವಿಕಸನ ತರಬೇತುದಾರರಂತೆ ಸಮಾಜಕ್ಕೆ ಬೆಳಕಾಗಿದ್ದರು ಎಂದರು.

ತಹಶೀಲ್ದಾರರಾದ ಅಮರೇಶ್.ಜಿ.ಕೆ ಇವರು ಮಾತನಾಡಿ ವಿಶ್ವಕ್ಕೆ ಮೊಟ್ಟ ಮೊದಲ ಪಾರ್ಲಿಮೆಂಟ್ನಂತಹ ಅನುಭವ ಮಂಟಪದ ಕಲ್ಪನೆಯನ್ನು ಪರಿಚಯಿಸಿದ ಮಹಾನ್ ಸಮಾಜ ಸುಧಾರಕರು. ಕಾಯಕಕ್ಕೆ ಮಹತ್ವ ನೀಡಿ ಅದನ್ನು ಕೈಲಾಸವಾಗಿಸಿ, ದಾಸೋಹದ ಮೂಲಕ ಹಂಚಿ ತಿನ್ನುವ ಬುದ್ದಿಯನ್ನು ಕಲಿಸಿದರು. ಎಲ್ಲರನ್ನು ತನ್ನವರೆಂದು ಬಗೆದು ಸಮಾಜದಲ್ಲಿ ಜಾತಿ, ವರ್ಗ ಭೇದಗಳನ್ನು ಅಳಿಸಲು ಶ್ರಮಿಸಿದರು. ಹೀಗಾಗಿ ಬಸವಣ್ಣನವರು ನಮಗೆ ಮಾತ್ರವಲ್ಲ ಇಡೀ ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿದ ಮೇರು ಪರ್ವತ. ಇಂತಹ ಮಹಾನ್ ಶರಣರು. ನೆಲೆಸಿದ್ದ ನಾಡಿನಲ್ಲಿ ಜೀವಿಸಿದ್ದೇವೆ ಎನ್ನುವ ಹೆಮ್ಮೆ ನಮ್ಮದಾಗಿದೆ. ಅವರು ನೀಡಿದ ಸಂದೇಶವನ್ನು ಪಾಲಿಸಿ ನಡೆದಲ್ಲಿ ಸಮಾಜದಲ್ಲಿ ಸಂಘರ್ಷವೇ ಇರುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ನೌಕರರಾದ ಈಶ್ವರಪ್ಪ ತುರಕಾಣಿ, ರಾಜೇಂದ್ರಗೌಡ, ಮುಖಂಡರಾದ ಶಶಿಮೌಳಿ ದೇವರಮನಿ, ವೀರನಗೌಡ, ಸಿಬ್ಬಂದಿ ದೇವರಾಜ ಅರಸು, ಮಂಜುನಾಥ, ಸುಧಾ ಜೈನರ್, ಭೂಮಾಪಕ ಭರಮಣ್ಣ, ಗ್ರಾಮ ಆಡಳಿತ ಅಧಿಕಾರಿಗಳಾದ ರಮೇಶ, ಸಿದ್ದೇಶ, ಮಲ್ಲೇಶ, ಜ್ಯೋತಿಬಾಯಿ, ಸೌಭಾಗ್ಯ, ಚಂದ್ರಿಕಾ ಮುಂತಾದವರಿದ್ದರು. ಸಿ ಮ ಗುರುಬಸವರಾಜ ಸ್ವಾಗತಿಸಿ, ನಿರೂಪಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!