ಸಿರುಗುಪ್ಪ – ಮನುಷ್ಯನು ಜಗತ್ತಿನಲ್ಲಿ ಜಾತಿ ಮತಗಳೆಂಬ ಭೇದ ಭಾವದಲ್ಲಿ ಮುಳುಗಿ ಹೋಗಿದ್ದಾನೆ , ಸ್ವಾರ್ಥಿಯಾಗಿದ್ದಾನೆ ಯಾವ ಮನುಷ್ಯನು ಆತ್ಮಜ್ಞಾನಿಯಾಗಿರುತ್ತಾನೋ ಅವನಿಗೆ ಈ ಜಾತಿ ಮತ ಪಂಥಗಳ ಬಂಧನ ಇರುವುದಿಲ್ಲ ಜಗತ್ತಿಗೆ ಭಗವಂತನೇ ಎಂದು ಉಪ ತಹಶೀಲ್ದಾರ್ ಸಿದ್ದಾರ್ಥ ಕಾರಂಜಿ ಅವರು ಅಭಿಪ್ರಾಯಪಟ್ಟರು ಸಿರುಗುಪ್ಪ ನಗರದ ತಾಲೂಕು ಕಚೇರಿ ಸಭಾ ಭವನದಲ್ಲಿ ಕರ್ನಾಟಕ ಸರ್ಕಾರ ಕನ್ನಡ ಸಂಸ್ಕೃತಿ ಇಲಾಖೆ ತಾಲೂಕು ಆಡಳಿತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಪಂಚಾಯತ್ ನಗರಸಭೆ ಎಲ್ಲಾ ಇಲಾಖೆಗಳ ಸಹಭಾಗಿತ್ವದಲ್ಲಿ 1239ನೇ ಶ್ರೀ ಆದಿ ಶಂಕರಾಚಾರ್ಯ ಜಯಂತಿಯ ಅಂಗವಾಗಿ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರವರ ಭಾವಚಿತ್ರಕ್ಕೆ ಮಾಲಾರ್ಪಣೆ ಪುಷ್ಪ ಅರ್ಪಿಸಿ ಗೌರವ ನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಶಾಂತಿ ಸಭೆ ಸದಸ್ಯರು ಸಮಾಜ ಸುಧಾರಕ ಅಬ್ದುಲ್ ನಬೀ ಅವರು ಮಾತನಾಡಿ ಈ ಜಗತ್ತಲ್ಲೆವೂ ಪರಮಾತ್ಮನಿಂದಲೇ ಅವರಿಸಲ್ಪಟ್ಟಿದೆ ನಮ್ಮಲ್ಲಿನ ಅಜ್ಞಾನ ನಿವಾರಣೆಯಾದರೆ ಸಾಕು ಜ್ಞಾನದಿಂದಲೇ ಮೋಕ್ಷ ತಾನಾಗಿ ಸಿಗುತ್ತದೆ ನಾಗರೀಕತೆ ಬೆಳೆದಂತೆಲ್ಲಾ ಮನುಷ್ಯನು ಅನಾಗರಿಕನಾಗುತ್ತಿದ್ದಾನೆ ಎಂದರೆ ತಪ್ಪಾಗಲಿಕ್ಕಿಲ್ಲ ಏಕೆಂದರೆ ನನ್ನ ದೇಶ ನನ್ನ ಜನ ಎಂಬ ವಣ ಅಹಂನಲ್ಲಿ ಮುಳುಗಿದ್ದಾನೆ ಹೀಗಾಗಿಯೇ ಅಮೇರಿಕಾ ಇಸ್ರೇಲ್ ಇರಾನ್ ದೇಶಗಳ ನಡುವೆ ಯುದ್ಧ ನಡೆದಿರುವುದು ಲಕ್ಷಾಂತರ ಜನರ ರಕ್ತದ ಮಾರಣ ನಮ್ಮ ಕಣ್ಣು ಮುಂದೆಯೇ ಹೋಮ ಜರುಗಿದೆ ಮನುಷ್ಯ ಜಾತಿ ಮತಗಳ ಪಂಥಗಳಿಗೆ ಜೋತು ಬಿದ್ದಿದ್ದಾನೆ ಜಾತಿ ಪ್ರೇಮದ ಬಲೆಯಲ್ಲಿ ಸಿಕ್ಕಿಕೊಂಡಿದ್ದಾನೆ ಸ್ವಜಾತಿ ಪ್ರೇಮ ಹೆಚ್ಚಾಗಿದೆ ಇದರ ನಡುವೆಯೇ ಜಾತೀಯತೆಯ ಭೀಕರತೆ ಹೆಚ್ಚಾಗಿದೆ ಮನುಷ್ಯನು ಮಾನವತೆಗೆ ಹೆಚ್ಚೆಚ್ಚು ಒತ್ತು ಕೊಡುವ ಅಗತ್ಯವಿದೆ ಮೋಕ್ಷಕ್ಕೆ ಆತ್ಮಜ್ಞಾನವೇ ಮುಖ್ಯ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಈ ಬಗ್ಗೆ ಶಂಕರಾಚಾರ್ಯರು ಸರಳ ಜೀವನ ನಡೆಸಲು ಸದಾ ಉಪದೇಶಿಸುತ್ತಿದ್ದರು ಎಂದರು ಕಂದಾಯ ಇಲಾಖೆಯ ತಾಲೂಕು ಕಚೇರಿಯ ಎಸ್ ಡಿ ಎ ತುಷಾರ್ ಖಲಂದರ್ ಗಿರಿಯಪ್ಪ ಶೇಖರ್ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ ಸಿಬ್ಬಂದಿ ವರ್ಗ ಸಾರ್ವಜನಿಕರಿದ್ದರು.
ವರದಿ : ಮಸೀದಿ,ಅಬ್ದುಲ್ ಗೌಸ್, ಸಿರುಗುಪ್ಪ




















