ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನ ನಾಗೂರು (ಎಂ )ಗ್ರಾಮದ ಧರಿ ಹನುಮಾನ್ ಹತ್ತಿರವಿರುವ ಜ್ಞಾನ ಭಾರತಿ ಗುರುಕುಲದ ವಿದ್ಯಾರ್ಥಿನಿ ದಿವ್ಯಾ
ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 619 (ಶೇ 99.04) ಅಂಕ ಪಡೆದು ಸಾಧನೆ ಮಾಡಿದ್ದಾರೆ. ಈ ವಿದ್ಯಾರ್ಥಿನಿ ಒಂದನೇ ತರಗತಿಯಿಂದಲೇ ಆರ್‌ಟಿಇ ಅಡಿಯಲ್ಲಿ ಉಚಿತ ಶಿಕ್ಷಣ ಪ್ರವೇಶ ಪಡೆದು 1ರಿoದ 10ನೇ ತರಗತಿವರೆಗೆ ಜ್ಞಾನಭಾರತಿ ಗುರುಕುಲ ಶಾಲೆಯಲ್ಲಿ ಓದಿದ್ದಾರೆ. ವಿದ್ಯಾರ್ಥಿನಿ ದಿವ್ಯಾ ಅವರು ಕನ್ನಡದಲ್ಲಿ 125, ಇಂಗ್ಲಿಷ್ ನಲ್ಲಿ 99, ಹಿಂದಿಯಲ್ಲಿ 100, ವಿಜ್ಞಾನದಲ್ಲಿ 96, ಗಣಿತ 99, ಸಮಾಜದಲ್ಲಿ 100 ಹೀಗೆ ಒಟ್ಟು 619 ಅಂಕಗಳನ್ನು ಪಡೆದ ದಿವ್ಯಾ ಅವರ ಈ ಸಾಧನೆಗೆ ಶಾಲೆಯ ಶಿಕ್ಷಕರು, ಶಾಲೆಗೆ ಹಾಗೂ ಊರಿಗೆ ಗೌರವ ತಂದುಕೊಟ್ಟ ವಿದ್ಯಾರ್ಥಿನಿಗೆ ಅಭಿನಂದನೆಗಳನ್ನು ತಿಳಿಸಿ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿ ಸಂಗಮೇಶ ಚಿದ್ರೆ




















