ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಾಸವಿ ಜಯಂತಿ ಪ್ರಯುಕ್ತ ವಾಸವಿ ಯುವಜನ ಸಂಘ ನೇತೃತ್ವದಲ್ಲಿ ರಕ್ತದಾನ ಶಿಬಿರ

ಬಳ್ಳಾರಿ / ಕಂಪ್ಲಿ : ವಾಸವಿ ಜಯಂತಿ ಪ್ರಯುಕ್ತ ವಾಸವಿ ಯುವಜನ ಸಂಘ ನೇತೃತ್ವದಲ್ಲಿ, ಆರ್ಯವೈಶ್ಯ ಸಂಘ ಸ್ವಾಮಿ ವಿವೇಕಾನಂದ ಚಾರಿಟೇಬಲ್ ರಕ್ತ ಕೇಂದ್ರ ಬಳ್ಳಾರಿ ಹಾಗೂ ಗೋಪಿ ಚಾರಿಟೇಬಲ್ ರಕ್ತ ಕೇಂದ್ರ ಗಂಗಾವತಿ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರ ನಡೆಯಿತು.
ಶಿಬಿರದಲ್ಲಿ 32ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.

ವಾಸವಿ ಯುವಜನ ಸಂಘದ ಅಧ್ಯಕ್ಷ ಡಿ ಮಂಜೇಶ್ ಮಾತನಾಡಿ, ವಾಸವಿ ಜಯಂತಿ ಪ್ರಯುಕ್ತ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ 32ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದ್ದಾರೆ,
ರಕ್ತದಾನ ಶಿಬಿರಗಳಿಂದ ತುರ್ತು ಸಂದರ್ಭಗಳಲ್ಲಿ, ಶಸ್ತ್ರಚಿಕಿತ್ಸೆಗಳು, ಅಪಘಾತಗಳು ಮತ್ತು ರಕ್ತಹೀನತೆಯಂತಹ ಗಂಭೀರ ಕಾಯಿಲೆಗಳಿಗೆ ಅಗತ್ಯವಾದ ರಕ್ತವನ್ನು ಒದಗಿಸುವ ಮೂಲಕ ಜೀವ ಉಳಿಸುವ ಪ್ರಮುಖ ಪಾತ್ರ ವಹಿಸುತ್ತವೆ. ಇವು ಸಮಾಜದಲ್ಲಿ ಸ್ವಯಂಪ್ರೇರಿತ ರಕ್ತದಾನದ ಸಂಸ್ಕೃತಿಯನ್ನು ಉತ್ತೇಜಿಸಿ, ರಕ್ತ ಬ್ಯಾಂಕ್‌ಗಳಲ್ಲಿ ರಕ್ತದ ಲಭ್ಯತೆಯನ್ನು ಖಚಿತಪಡಿಸುತ್ತವೆ ಮತ್ತು ಆರೋಗ್ಯ ತಪಾಸಣೆಯ ಮೂಲಕ ದಾನಿಗಳ ಆರೋಗ್ಯದ ಬಗ್ಗೆಯೂ ಜಾಗೃತಿ ಮೂಡಿಸುತ್ತವೆ. ಒಂದು ಯೂನಿಟ್ ರಕ್ತವು ಮೂರು ಜೀವಗಳನ್ನು ಉಳಿಸಬಲ್ಲದು ಎಂದರು.

ಶಿಬಿರದಲ್ಲಿ ರಕ್ತನಿದಿಯ ತಂತ್ರಜ್ಞರು, ಪ್ರಮುಖರಾದ ಡಿ. ಶ್ರೀಧರ ಶೆಟ್ಟಿ, ಡಿ. ಕೃಷ್ಣಪ್ಪ ಶೆಟ್ಟಿ, ನರಸಿಂಹಲು, ಸತ್ಯ, ರುದ್ರೇಶ್, ಪಿ. ತಿರುಮಲೇಶ್, ಗುರುಕೃಷ್ಣ ದನಪಾಲ್, ಸಿ. ಸುನಿಲ್ ಕುಮಾರ್, ಎ. ರವಿಕಿರಣ, ಎಚ್. ಹರೀಶ್, ಜಿ. ತಿರುಮಲೇಶ್, ಅರವಿಂದ್, ಬಿ. ಸತ್ಯನಾರಾಯಣ, ಕೆ. ಸುರೇಂದ್ರ, ಜಿ. ಶ್ರೀನಿವಾಸ್, ಡಿ.ಅನಿಲ್ ಕುಮಾರ್, ರಾಜೇಂದ್ರ ಸೇರಿದಂತೆ ಸಮಾಜ ಬಾಂಧವರು ಸೇರಿದಂತೆ ಇತರರು ಹಾಜರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!