
ಇಲಕಲ್ ನ ಜೋಷಿಗಲ್ಲಿಯಲ್ಲಿರುವ
ಶ್ರೀ ಶಾರದಾ ಮಂದಿರ ಅಭಿವೃದ್ಧಿ ಟ್ರಸ್ಟ್ (ರಿ.) ವತಿಯಿಂದ ಶ್ರೀ ಶಾರದಾ ಮಂದಿರದ ೨೧ನೇ ವಾರ್ಷಿಕೋತ್ಸವ ಕಾರ್ಯಕ್ರಮವು ದಿನಾಂಕ: ೦೧-೦೫-೨೦೨೬ ಶುಕ್ರವಾರ :ಸಂಜೆ ೭ ಗಂಟೆ ೩೦ ನಿಮಿಷಕ್ಕೆ ಸಾನಿಧ್ಯವನ್ನು ಮಾತೋಶ್ರೀ ಲೀಲಾವತಿ ಮುನಿಸ್ವಾಮಿಗಳು ದೇವಾಂಗಮಠ (ಇಳಕಲ್) ಇವರು ವಹಿಸಿದ್ದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಧರ್ಮದರ್ಶಿ ನೀಲಕಂಠ ಮ. ಕಾಳಗಿಯವರು ಶಾರದಾ ಮಂದಿರ ಸ್ಥಾಪನೆಯ ಹೋರಾಟದ ದಿನಗಳನ್ನು ಕುರಿತು ಮನದಾಳದ ಮಾತುಗಳನ್ನು ಹಂಚಿಕೊಂಡರು.

ಅಧ್ಯಕ್ಷತೆಯನ್ನು ಇಲಕಲ್ ನ ಮಾನ್ಯ ಶ್ರೀ ವೆಂಕಟೇಶ ವಿ. ಸಾಕಾ ಗ್ರಾನೈಟ್ ಉದ್ಯಮಿದಾರರು ಹಾಗೂ ಕಲಾಪೋಷಕರು, ವಹಿಸಿಕೊಂಡು ಧರ್ಮದರ್ಶಿಗಳಾದ ನೀಲಕಂಠ ಮ.ಕಾಳಗಿಯವರ ನಿಸ್ವಾರ್ಥ ಸೇವೆ ಕುರಿತು ತಮ್ಮ ಮನದಾಳದ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಪ್ರಶಾಂತ ವಿ.
ಹಂಚಾಟೆ ಹಿರಿಯ ತೆರಿಗೆ ಸಲಹೆಗಾರರು ,
ಇವರು ಶಾರದಾ ಮಂದಿರದ ವಿಶೇಷತೆ ಬಗ್ಗೆ ಮಾತನಾಡುತ್ತಾ ರಾಮಾಯಣ, ಮಹಾಭಾರತ ದೃಶ್ಟಾಂತಗಳನ್ನು ತಿಳಿಸಿದರು. ಅತಿಥಿಗಳಾಗಿ ಶ್ರೀ ಮೌಲೇಶ ತಿಮ್ಮಣ್ಣ ಬಂಡಿವಡ್ಡರ ಸದಸ್ಯರು, ನಗರಸಭೆ,ಇಲಕಲ್ಲ,
ಶ್ರೀ ಪರಶುರಾಮ ಜೆ. ರಾಜೊಳ್ಳಿ ಅಧ್ಯಕ್ಷರು, ಸ್ವರಸಿಂಧು ಮೆಲೋಡೀಸ್ (ರಿ.), ಇಳಕಲ್ ಆಗಮಿಸಿದ್ದರು.
ಇದೇ ಸಮಯದಲ್ಲಿ ಕನ್ನಡಪರ ಹಾಗೂ ಭಕ್ತಿಗೀತೆಗಳ ಗಾಯನ ಪ್ರಸ್ತುತಿಯನ್ನು- ಸ್ವರಸಿಂಧು ಮೆಲೋಡೀಸ್ (ರಿ), ಇಳಕಲ್ ನ ತಂಡದವರು ನಡೆಸಿಕೊಟ್ಟರು.
ಜಂಗಮಜ್ಯೋತಿ ರುದ್ರಪಠಣ ಮಹಿಳಾ ಬಳಗ, ಇಳಕಲ್ ಇವರ ಸಹಯೋಗದೊಂದಿಗೆ ಯಶಸ್ವಿಯಾಗಿ ಜರುಗಿತು.




















