ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅರ್ಥಪೂರ್ಣವಾಗಿ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಬಳ್ಳಾರಿ / ಕಂಪ್ಲಿ : ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ, ಹೇಮ ವೇಮ ರೆಡ್ಡಿ ಜನ ಸಂಘ ಕಂಪ್ಲಿ-ಫಿರ್ಕಾ ಸಹಯೋಗದಲ್ಲಿ ಶಿವಭಕ್ತೆ ಹಾಗೂ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.
ತದ ನಂತರ ಶಿರಸ್ತೇದಾರ ಪಂಪಾಪತಿ ಮಾತನಾಡಿ, ತನಗಾಗಿ ಏನನ್ನೂ ಬೇಡದ ಹೇಮರೆಡ್ಡಿ ಮಲ್ಲಮ್ಮ ಸಮಾಜಕ್ಕಾಗಿ ಮತ್ತು ನಿಸ್ವಾರ್ಥದಿಂದ ಬದುಕಿದವಳು. ಮಾನವ ಕುಲದ ಜೀವಲೋಕದ ಮಹಾತಾಯಿ ಹೇಮರೆಡ್ಡಿ ಮಲ್ಲಮ್ಮ. ಕೌಟುಂಬಿಕ ಕಲಹಗಳ ನಡುವೆ ಕಷ್ಟಗಳು ಅವಮಾನಗಳನ್ನು ಸಹಿಕೊಂಡು ಬದುಕಿನ ಮಹಾಸ್ವಾದಿ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಧೀಮಂತ ಮಹಿಳೆಯಾಗಿದ್ದಳು. ಮಲ್ಲಮ್ಮನ ಅದರ್ಶಗಳು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿವೆ ಎಂದರು.
ನಂತರ ಹೇಮ ವೇಮ ರೆಡ್ಡಿ ಜನ ಸಂಘ ಕಂಪ್ಲಿ-ಫಿರ್ಕಾ ಯುವ ಮುಖಂಡ ಟಿ.ವಿ.ಸುದರ್ಶನ್ ರೆಡ್ಡಿ ಮಾತನಾಡಿ, ಶಿವಭಕ್ತೆ ಹೇಮರೆಡ್ಡಿ ಮಲ್ಲಮ್ಮನ ಕೊಡುಗೆ ನಾಡಿಗೆ ಅತ್ಯುತ್ತಮವಾಗಿದೆ. ಅವರ ಆದರ್ಶ ಗುಣಗಳನ್ನು ಪರಿಪಾಲಿಸುವ ಮೂಲಕ ಉತ್ತಮ ಜೀವನ ನಡೆಸೋಣ. ಇವರ ಪ್ರತಿಯೊಂದು ಕೊಡುಗೆಗಳು ಮನುಷ್ಯನ ಬದುಕಿಗೆ ದಾರಿದೀಪವಾಗಿವೆ ಎಂದರು.
ಮುಖಂಡ ಮೆಟ್ರಿ ಹೊನ್ನಳ್ಳಿ ಗಂಗಾಧರ್‌ಗೌಡ ಮಾತನಾಡಿ, ಕಾಯಕವೇ ಕೈಲಾಸ ಎಂಬ ನಾಡು ನುಡಿಯಂತೆ ಪ್ರತಿಯೊಬ್ಬರೂ ನಿಷ್ಠೆ, ಕಾಯಕದೊಂದಿಗೆ ಒಳ್ಳೆಯ ಜೀವನದ ಕಡೆಗೆ ಸಾಗಬೇಕಾಗಿದೆ. ಇಲ್ಲಿನ ತಹಶೀಲ್ದಾರ್ ಕಚೇರಿಯ ಸಭಾಂಗಣವನ್ನು ಸ್ವಚ್ಚಗೊಳಿಸದೇ, ಜಯಂತಿಯನ್ನು ತಾಲೂಕು ಆಡಳಿತವು ಬೇಕಾಬಿಟ್ಟಿಯಲ್ಲಿ ಆಚರಣೆ ಮಾಡುವ ಮೂಲಕ ಅಪಮಾನ ಮಾಡಿದೆ. ಇಲ್ಲಿ ಸ್ವಚ್ಛತೆ ಮಾಯವಾಗಿದ್ದು, ಇದರ ನಡುವೆ ಅಧಿಕಾರಿಗಳ ನಿರ್ಲಕ್ಷ್ಯ ಭಾವದಿಂದ ಜಯಂತಿ ಆಚರಣೆ ಮಾಡುವಂತಾಗಿದೆ. ಭಾನುವಾರ ಬಂತೆಂದರೆ ಸಾಕು ಯಾವುದೇ ಜಯಂತಿ ಇದ್ದರೆ ಬೇಕಾಬಿಟ್ಟಿಯಲ್ಲಿ ಮಾಡಿ ಮುಗಿಸುವುದು ಇಲ್ಲಿನ ಅಧಿಕಾರಿಗಳ ಪ್ರವೃತಿಯನ್ನುವಂತೆ ಕಾಣುತ್ತಿದೆ. ಇಲ್ಲಿನ ಜಯಂತಿಯಲ್ಲಿ ಮುಖ್ಯವಾಗಿ ತಹಶೀಲ್ದಾರರು ಭಾಗವಹಿಸಬೇಕಾಗಿತ್ತು. ಸರ್ಕಾರವೇ ಜಯಂತಿಯನ್ನು ಆಚರಿಸುತ್ತಿದೆ. ಆದರೆ, ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿ ನೋಡಿದರೆ, ಜಯಂತಿಗಳಿಗೆ ಅಪಮಾನ ಮಾಡುವುದು ಗೋಚರಿಸುತ್ತದೆ. ಮುಂದಿನ ದಿನದಲ್ಲಿ ಯಾವುದೇ ಜಯಂತಿಯಾಗಲಿ ಸ್ವಚ್ಚತೆ, ಸುಂಧರ ಮತ್ತು ಅಚ್ಚುಕಟ್ಟಾಗಿ ಜಯಂತಿ ಮಾಡಿದರೆ ಮಾತ್ರ ಜಯಂತ್ಯೋತ್ಸವಗಳಿಗೆ ಅರ್ಥ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಮಾಲತೇಶ ದೇಶಪಾಂಡೆ, ರೆಡ್ಡಿ ಜನ ಸಂಘದ ಮುಖಂಡರಾದ ರಾಜಶೇಖರರೆಡ್ಡಿ, ಕೆ.ಪವನ್‌ಕುಮಾರರೆಡ್ಡಿ, ಡಾ.ಶ್ರೀನಿವಾಸರೆಡ್ಡಿ, ಹೊನ್ನಳ್ಳಿ ಶಿವಪುತ್ರಪ್ಪ, ಸುರೇಶರೆಡ್ಡಿ, ಕಾಮರೆಡ್ಡಿ, ಲಕ್ಷ್ಮಣ್‌ರೆಡ್ಡಿ, ಜಗದೀಶ್‌ರೆಡ್ಡಿ, ಆನಂದ್‌ರೆಡ್ಡಿ, ವೆಂಕಟರೆಡ್ಡಿ, ರಮೇಶ್‌ರೆಡ್ಡಿ, ಮಾಧವರೆಡ್ಡಿ, ಹರೀಶ್‌ರೆಡ್ಡಿ, ತಿಪ್ಪಾರೆಡ್ಡಿ, ಎನ್ ಜಗದೀಶ್‌ರೆಡ್ಡಿ, ಕೆ.ಭಾಸ್ಕರ್‌ರೆಡ್ಡಿ, ವೆಂಕಟಕೃಷ್ಣರೆಡ್ಡಿ ಸೇರಿದಂತೆ ಅನೇಕರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!