ಗಂಗಾವತಿ: ತಾಲೂಕಿನ ಶ್ರೀರಾಮನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪಿ.ವೆಂಕಟೇಶ್ವರರಾವ್, ಉಪಾಧ್ಯಕ್ಷರಾಗಿ ಜಿ.ಆದಿನಾರಾಯಣ ಅವಿರೋಧ ಮಂಗಳವಾರ ಆಯ್ಕೆಯಾದರು. ಸಂಘದ ಐದು ವರ್ಷದ ಆಡಳಿತ ಮಂಡಳಿಗೆ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ಜರುಗಿದ ಚುನಾವಣೆಯಲ್ಲಿ 12 ಸದಸ್ಯರು ಚುನಾಯಿತರಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರೇ ನಾಮಪತ್ರ ಸಲ್ಲಿಸಿದ್ದರು. ಆಯ್ಕೆಯಾದ ಎನ್.ಪ್ರಸಾದರಾವ್, ರೆಡ್ಡಿ ನಾಗೇಶ್ವರರಾವ್, ಸಿಂಹಾದ್ರಿ ಶ್ರೀನಿವಾಸ, ಲೋಕಪ್ಪ, ಎನ್. ಮಲ್ಲಿಕಾರ್ಜುನ, ಎ.ರಾಮಕೃಷ್ಣರಾಜು, ಎಂ.ಸಂಗಪ್ಪ, ವೀರಮ್ಮ, ಕೆ.ಉರ್ಮಿಳಾ, ಎಂ.ಶ್ರೀನಿವಾಸರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ರಾಧಾಮಣಿ ಇತರರಿದ್ದರು.
– ಕರುನಾಡ ಕಂದ ಪತ್ರಿಕೆ


















