ಗಂಗಾವತಿ: ಮೇ 16 ಮತ್ತು 17 ರಂದು ಕನಕಗಿರಿಯಲ್ಲಿ ನಡೆಯುವ ಇತಿಹಾಸ ಪ್ರಸಿದ್ದ ಕನಕಗಿರಿ ಉತ್ಸವದಲ್ಲಿ ಎಲ್ಲರಂತೆ ಅಂಗವಿಕಲರಿಗೂ ಸಮಾನ ಅವಕಾಶ ಕಲ್ಪಿಸಿಕೊಡಿ ಎಂದು ಕರವೇ (ಪ್ರವಿಣಕುಮಾರ ಶೆಟ್ಟಿ ಬಣ) ಅಂಗವಿಕಲರ ಕ್ಷೇತ್ರದ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿ ವಿನಂತಿಸಿದ್ದಾರೆ.
ಅಂಗವಿಕಲರು ಕೂಡಾ ಸಾಹಿತ್ಯಿಕ, ಸಾಮಾಜಿಕ, ಶೈಕ್ಷಣಿಕ, ಕ್ರೀಡೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಸಾಧನೆ ಮಾಡಿದ್ದಾರೆ. ಆದರೆ ಅವರಿಗೆ ಗೌರವಿತ ಬದುಕು ಕನಸಾಗಿಯೇ ಉಳಿದಿದೆ. ನಮಗೆ ಈ ಉತ್ಸವದಲ್ಲಿ ಭಾಗವಹಿಸಲು ಹಾಗೂ ಉತ್ಸವ ನೋಡಲು ಪ್ರತ್ಯೇಕ ವ್ಯವಸ್ಥೆ ಕಲ್ಲಿಸಬೇಕು. ಸರಕಾರ ನಮಗೆ ಶೇ 5 ರಷ್ಟು ಮಿಸಲನ್ನು ಕೊಟ್ಟಿದ್ದರೂ ಸಹ ಇಂತಹ ಉತ್ಸವ, ನಾಡಹಬ್ಬ, ನುಡಿ ಹಬ್ಬ, ಸಮ್ಮೇಳನ, ಸಮಾವೇಶಗಳಲ್ಲಿ ನಮ್ಮನ್ನು ಕಡೆಗಣಿಸುತ್ತಿರುವುದು ನೋವಿನ ಸಂಗತಿಯಾಗಿದೆ. ಅಲ್ಲದೇ ಈ ಬಾರಿಯ ಕನಕಗಿರಿ ಉತ್ಸವದಲ್ಲಿ ಹೆಲಿಕ್ಯಾಪ್ಟರ್ ಮೂಲಕ ಕನಕಗಿರಿಯ ಜಾಯರೈಡ್ ಎಂಬ ಹೆಸರಿನಲ್ಲಿ ಪ್ರಯಾಣದ ಸೌಲಭ್ಯ ಕಲ್ಪಿಸಿ ಅಂಜನಾದ್ರಿ ಬೆಟ್ಟ, ಪಂಪಾಸರೋವರ, ಹಂಪಿ, ನವ ಬೃಂದಾವನ ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಈ ವೀಕ್ಷಣೆಗೆ ಪ್ರತಿಯೊಬ್ಬರಿಗೆ ರೂ. 3649/- ಗಳನ್ನು ನಿಗದಿ ಮಾಡಲಾಗಿರುತ್ತದೆ. ಅಂಗವಿಕಲರಿಗೂ ಸಹ ಎಲ್ಲರಂತೆ ಹೆಲಿಕ್ಯಾಪ್ಟರ್ ನಲ್ಲಿ ಸುತ್ತಾಡಬೇಕೆಂಬ ಬಯಕೆ ಇದ್ದು, ಅವಕಾಶ ಸಿಗುತ್ತಿಲ್ಲ. ಈ ಬಾರಿಯ ಕನಕಗಿರಿಯ ಜಾಯರೈಡ್ ನಲ್ಲಿ ಅಂಗವಿಕರಿಗೆ ಹೆಲಿಕ್ಯಾಪ್ಟರ್ ಪ್ರಯಾಣದ ದರದಲ್ಲಿ ರಿಯಾಯಿತಿ ನೀಡಿ ಅವಕಾಶ ಕಲ್ಪಿಸಿಕೊಡಬೇಕೆಂದು ಸರ್ಕಾರಕ್ಕೆ ಹಾಗೂ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಒತ್ತಾಯಿಸಿದರು.
- ಕರುನಾಡ ಕಂದ ಸುದ್ದಿ




















