ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಭೀಮಾಂಬಿಕಾದೇವಿ ಮಠದಲ್ಲಿ 386 ನೆ ಶಿವಾನುಭವ ಗೋಷ್ಠಿಯಲ್ಲಿ ” ಮಾತೃ ದೇವೋ ಭವ” ಚಿಂತನಗೋಷ್ಠಿ

ಕೊಪ್ಪಳ/ ಯಲಬುರ್ಗಾ: ತಾಯಿ ತಂದೆಗಳೆ ನಿಜವಾದ ದೇವರು ಅವರನ್ನು ನಾವು ಪ್ರೀತಿಯಿಂದ ಕಾಣಬೇಕು ,ಅವರಿಗೆ ಗೌರವ ಕೊಡಬೇಕು ಅಂದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಇನ್ನರ್ ವೀಲ್ ಕ್ಲಬ್ ಅದ್ಯಕ್ಷೆ ಚೆನ್ನಮ್ಮ ಪಾಟೀಲ್ ಅವರು ದಮ್ಮೂರು ಗ್ರಾಮದ ಶ್ರೀ ಭೀಮಾಂಬಿಕಾ ದೇವಿಯ ಮಠದಲ್ಲಿ 386 ನೇ ಶಿವಾನುಭವ ಗೋಷ್ಠಿಯಲ್ಲಿ ” ಮಾತೃ ದೇವೋ ಭವ ಚಿಂತನ ಗೋಷ್ಠಿಯಲ್ಲಿ ಮಾತನಾಡಿದರು. ತಾಯಿ ಮಕ್ಕಳಗೆ ಸಂಸ್ಕಾರ ಸಂಕೃತಿ ಕಲಿಸುವ ಜೋತೆಗೆ ಮಕ್ಕಳನ್ನು ಬೆಳೆಸುತ್ತಾಳೆ ಆದರೆ ತಂದೆ ಆರ್ಥಿಕ ವೆಚ್ಚವನ್ನು ಭರಿಸುತ್ತಾನೆ ಇವರಿಬ್ಬರ ಸೇವೆ ಅಪಾರವಾಗಿದೆ ಎಂದು ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಶಕುಂತಲಾದೇವಿ ಮಾಲಿ ಪಾಟೀಲ್ ಅವರು ಶ್ರೀ ಭೀಮಾಂಬಿಕಾದೇವಿ ಮಠದಲ್ಲಿ ಬಾದಾಮಿ ಅಮಾವಾಸ್ಯೆ ಚತುರ್ದಶಿ ನಿಮಿತ್ತವಾಗಿ ತಾಲೂಕಿನ ದಮ್ಮೂರ ಗ್ರಾಮದಲ್ಲಿ 386 ನೇ ಶಿವಾನುಭವ ಗೋಷ್ಠಿಯಲ್ಲಿ ಮಾತೃ ದೇವೋ ಭವ ವಿಷಯ ಕುರಿತು ಮಾತನಾಡಿದರು. ಮಠದ ಒಡೆಯರಾದ ಹನುಮಂತಪ್ಪಜ್ಜ ಧರ್ಮರಮಠ, ಹಾಗೂ ಶರಣಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಒಬ್ಬ ತಾಯಿ ತನ್ನ ಕಷ್ಟಗಳನ್ನು ಸಹಿಸಿಕೊಂಡು ತಾನು ಉಪವಾಸವಿದ್ದು ಹತ್ತು ಮಕ್ಕಳನ್ನು ಜೋಪಾನ ಮಾಡಿ ಬೆಳೆಸುತ್ತಾಳೆ ಆದರೆ ಹತ್ತು ಮಕ್ಕಳು ಸೇರಿ ಒಬ್ಬ ತಾಯಿಯನ್ನು ಜೋಪಾನ ಮಾಡಲಾರದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ ಆದ್ದರಿಂದ ತಾಯಿ ತಂದೆಯವರನ್ನು ಪ್ರೀತಿಯಿಂದ ಕಾಣಬೇಕು ಎಂದು ಶ್ರೀ ಭೀಮಾಂಭಿಕಾದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಅದ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಹುಲಗಪ್ಪ ಬಂಡಿವಡ್ಡರ, ಮಹೇಶ ಕಟಗೇರಿ ಭೀಮಣ್ಣ ಹವಳಿ ಮಾತನಾಡಿದರು.

ಈರಪ್ಪ ರಾವಣಕಿ,ಡಿ.ಮೌನೇಶ ಬಡಿಗೇರ, ಬಸವರಾಜ ಪ್ರಭಣ್ಣನವರ, ಮಾಬುಸಾಬ ವಾಲಿಕಾರ, ಹೆಚ್.ಪಿ.ವಾಲಿಕಾರ, ಈರಣ್ಣ ಕಟಗೇರಿ, ಭೀಮಣ್ಣ ಚಿಕ್ಕಗೌಡ್ರ, ಬಸವರಾಜ ಮೇಲಸಕ್ರಿ, ಗುರುಮೂರ್ತಿ ಬಡಿಗೇರ ಉಪಸ್ಥಿತಿ ಇದ್ದರು.
ಈಶಪ್ಪ ಪ್ರಭಣ್ಣನವರ, ಸಂಕ್ರಪ್ಪ ಬಡಿಗೇರ ಕಳಕಪ್ಪ ಹಡಪದ ಸಂಗೀತ ಸೇವೆ ನೀಡಿದರು. ಬಳಿಕ ಅನ್ನ ಸಂತರ್ಪಣೆ ಜರುಗಿತು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!