ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಸ್ತಿ 8 : ಓದಿನ ಹವ್ಯಾಸ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.

ನಮ್ಮ ತಂದೆ ಮುಧೋಳದ ( ಬಾಗಲಕೋಟೆ ಜಿಲ್ಲೆ) ತಾಲೂಕ ಲೈಬ್ರರಿಗೆ ಮೆಂಬರ್ ಆದರು . ಅವರು ಮೊದಲು ಮಹಾತ್ಮಾ ಗಾಂಧಿಯವರನ್ನು ಓದಲು ಆಯ್ಕೆಮಾಡಿಕೊಂಡರು. ಅವರು ಗಾಂಧಿಯವರ
” My Experiments With Truth” ,
“Satyagraha in South Africa” “ comments on Geeta” ಓದಿದರು. ಇವರಿಗೆ ಗಾಂಧಿಯವರ “Naturopathy” ತುಂಬಾ ಹಿಡಿಸಿತು. ಅವರು ಜವಾಹರಲಾಲ ನೆಹರು ಅವರ ಆತ್ಮಚರಿತ್ರೆ” Towards Freedom (1936)” ಹಾಗೂ “ Letters to Priyadarshini” ಓದಿದರು. ಅವರು ನಂತರ ಸ್ವಾಮಿ ವಿವೇಕಾನಂದರ ಕೆಲ ಪುಸ್ತಕಗಳನ್ನೂ ಓದಿದರು. ಅವರು ಶಿವರಾಂ ಕಾರಂತ ಹಾಗೂ N.S. ಫಡಕೆ ( ಮರಾಠಿ) ಅವರ ಕೆಲ ಪುಸ್ತಕಗಳನ್ನು ಓದಿದರು. ಶ್ರೀ ಬಾಲಗಂಗಾಧರ ತಿಲಕ ಅವರ ಗೀತಾ ರಹಸ್ಯ ಪುಸ್ತಕವನ್ನು ಓದಲು ಪ್ರಯತ್ನಿಸಿದರು ಆದರೆ ಅದನ್ನು ಅವರಿಗೆ ಅರಗಿಸಿಕೊಳ್ಳಲು ಆಗಲಿಲ್ಲ.

ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯನ್ನು ತಪ್ಪದೆ ಓದುತ್ತಿದ್ದರು.

ಓದು ನಮ್ಮ ಶಬ್ದ ಭಂಡಾರವನ್ನು ವಿಸ್ತರಿಸುತ್ತದೆ ಅಲ್ಲದೇ ನಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುತ್ತದೆ, ಹೀಗಾಗಿ ನಾವು ಹೊಸ ಹೊಸ ಶಬ್ದಗಳನ್ನು ಉಪಯೋಗಿಸಬಹುದು. ಓದಿನಿಂದ ನಮಗೆ ಏನು ಬೇಕು ಅದನ್ನು ಸವಿಸ್ತಾರವಾಗಿ ವಿವರಿಸಲು ಬರುತ್ತದೆ. ಓದಿನಿಂದ ದೊರೆತ ಜ್ಞಾನವು ನಾವು ಇತರರೊಡನೆ ಮಾತನಾಡುವಾಗ ಹಾಗೂ ವ್ಯವಹರಿಸುವಾಗ ಉಪಯೋಗಕ್ಕೆ ಬರುತ್ತದೆ.

ನಮ್ಮ ತಂದೆಯವರು ಈ ಓದಿನ ಹವ್ಯಾಸವನ್ನು ನಮ್ಮ ಆರೂ ಜನ ಮಕ್ಕಳಿಗೆ ಆಸ್ತಿಯಾಗಿ ಹಸ್ತಾಂತರಿಸಿದ್ದಾರೆ .
asset 8
 ಖುಷಿ ಆಯಿತು Mr. Mattur Subbanna
ಅದ್ಭುತವಾದ ವಿಚಾರಗಳು ಸರ್…ತಾವು ಹೀಗೆ ಬರೀತಾ ಇರಿ….ಇದೊಂದು ಮೌಲಿಕ ಗ್ರಂಥವಾಗುವದರಲ್ಲಿ ಸಂದೇಹವಿಲ್ಲ. Nagraj Nadagouda
ತಂದೆ ತಾಯಿಯ ಅಸ್ತಿ ವಿವರ ಎಲ್ಲಾ ಓದಿದೆ. ನಾವೆಲ್ಲ ಚಿಕ್ಕವರಿದ್ದಾಗ ನಮ್ಮ ಹೆತ್ತವರಿಗೂ ಹಿರಿಯರಿಗೂ ಓದೇ ಪರಮ ಪ್ರೀತಿಯ ಹವ್ಯಾಸವಲ್ಲವೇ?
ಎಲ್ಲರ ಮನೆಯಲ್ಲೂ ಅಷ್ಟೆ. ಓದು ಸಂಗೀತ ಕೇಳುವುದು ಹೇಳುವುದು ಇವೇ ಮುಖ್ಯವಾದ ಮನರಂಜನೆ.
ಆ ಕಾಲದಲ್ಲಿ ಓದುವ ಹವ್ಯಾಸವಿಲ್ಲದವರೇ ಇರಲಿಲ್ಲ ಎನ್ನಬಹುದು.

ಪ್ರಾಮಾಣಿಕತೆ, ನಿಷ್ಠೆ, ನೈತಿಕತೆ, ಕಷ್ಟಸಹಿಷ್ಣುತೆ, ಉದಾರ ಹೃದಯ, ಮಾನವೀಯತೆ, ಆದರ್ಶ.ಇತ್ಯಾದಿ ಎಲ್ಲ ಗುಣಗಳೂ ಆ ಕಾಲದ ಹೆಚ್ಚು ಕಡಿಮೆ ಪ್ರತಿ ತಂದೆತಾಯಿಗಳಲ್ಲೂ ಇದ್ದದ್ದು ತೀರಾ ಸಹಜವಾಗಿತ್ತು ವಿಶೇಷವೆನಿಸುತ್ತಿರಲಿಲ್ಲ.

  • Smt Ratnamurthy.

Reading good books is really a good habit. It should be reflective and selective.

  • Dr. K B Dabade, Udupi

“Reading maketh a full man; conference a ready man; and writing an exact ಮನ್”
– Anil Goel, New Delhi

  • ಪ್ರಮೋದ್ ಕುಲಕರ್ಣಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!