ಬಾಗಲಕೋಟೆ -ಮುಧೋಳ : ರಾಜ್ಯದಲ್ಲಿ ಹೆಚ್ಚು ಜನಪದರನ್ನು ಹೊಂದಿರುವ ಕಲಾವಿದರ ಜಿಲ್ಲೆ ಬಾಗಲಕೋಟೆ. ಜಿಲ್ಲೆಯಲ್ಲಿ ಸಕಾ೯ರದ ಯೋಜನೆಗಳನ್ನು ಪಡೆಯುವುದರಲ್ಲಿ ಸಾಕಷ್ಟು ಕಲಾವಿದರು ಅವಕಾಶ ವಂಚಿತರಾಗಿ ಉಳಿದುಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟ ಅಧ್ಯಕ್ಷ ಪ.ಪೂ.ಶ್ರೀ ಶರಣಬಸವ ಶಾಸ್ತ್ರಿಗಳು ಹೇಳಿದರು.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಕಲಾವಿದರ ಹಲವಾರು ರೀತಿಯ ಸಮಸ್ಯೆಗಳ ಅಹವಾಲುಗಳನ್ನು ಆಲಿಸಿ ಮಾಹಿತಿ ಪಡೆದು ತೀವ್ರಗತಿಯ ಹೋರಾಟ ರೂಪಿಸಲು ಇದೆ ಸೋಮವಾರ ದಿ.25 ರಂದು ಗದ್ದನಕೇರಿಯ ಸದ್ಗುರು ಶ್ರೀ “ಲಡ್ಡು ಮುತ್ಯಾ” ದೇವಸ್ಥಾನದಲ್ಲಿ ಮುಂಜಾನೆ 8.30.ಕ್ಕೆ ಬಾಗಲಕೋಟೆ ಜಿಲ್ಲೆಯ ಸವ೯ ಕಲಾವಿದರ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದ ಅವರು ವಷ೯ವಿಡೀ ಜಿಲ್ಲೆಯಾದ್ಯಂತ ಧಾರ್ಮಿಕ.ಸಂಗೀತ. ಸಾಹಿತ್ಯಾತ್ಮಕ. ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಚರ್ಚಿಸಲಾಗುವದು. ಹಾಗಾಗಿ ಜನಪದ.ಸಂಗೀತ. ರಂಗಭೂಮಿ.ಸಾಹಿತ್ಯ ಕ್ಷೇತ್ರದ ಮುಖಂಡರುಗಳು ಪಾಲ್ಗೊಂಡು ಸಲಹೆ ಸೂಚನೆಗಳೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಕೋರಿದ್ದಾರೆ. ಮುಖಂಡರಾದ ಚಿನ್ನಪ್ಪಗೌಡ ಗಿಡ್ಢಪ್ಪಗೋಳ. ಶಂಕರೆಪ್ಪ ತಂಬಾಕದ.ಯಲ್ಲಪ್ಪ ಪೂಜಾರಿ. ಶಂಕರ ಲಮಾಣಿ[ಮುಂದಿನ ಮನಿ], ಪವಿತ್ರ ಜಕ್ಕಪ್ಪನವರ, ಈಶ್ವರ ಹೊರಟ್ಟಿ ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















