
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರ (ಬಿ.) ಗ್ರಾಮದ ವತಿಯಿಂದ ಸನ್ಮಾನ್ಯ ಈಶ್ವರ ಖಂಡ್ರೆ ಅವರು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿ ಮತ್ತೊಮ್ಮೆ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ನಿಟ್ಟೂರ (ಬಿ.) ಗ್ರಾಮಸ್ಥರು ಬೀದರ್–ಹುಮನಾಬಾದ್ ಬೈಪಾಸ್ ರಸ್ತೆಯ ಬಳಿ ಸೇರಿ ಸಚಿವರಾದ ಈಶ್ವರ ಖಂಡ್ರೆ ಅವರಿಗೆ ಶುಭಾಶಯಗಳನ್ನು ತಿಳಿಸಿ, ಅವರ ಮುಂದಿನ ಕಾರ್ಯಾವಧಿಗೆ ಯಶಸ್ಸನ್ನು ಕೋರಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ತುಕಾರಾಮ ದೊಡ್ಡಿ, ಬಾಲಾಜಿ ಪಾಟೀಲ, ದೇವಿದಾಸ ಪಾಟೀಲ, ಸತೀಶ ಪಾಟೀಲ, ರಾಜು ಪಾಟೀಲ, ಚಂದ್ರಕಾಂತ ಮಾನಕಾರಿ, ಬಾಬುರಾವ ಪಾಟೀಲ, ಪ್ರಭು ಪಾಟೀಲ, ಬಸವರಾಜ ಕರೆಪ್ಪಾನವರ, ನಾಮದೇವ ಪಾಟೀಲ, ಲಕ್ಷ್ಮಣ ದೋಡಿ ಸೇರಿದಂತೆ ಗ್ರಾಮದ ಮಹಿಳೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿಗಾರರು : ಗಜಾನಂದ ಪಾಟೀಲ




















