
ಕಳೆದ ಮೇ ತಿಂಗಳಿನಲ್ಲಿ ಚಿಕ್ಕಬಳ್ಳಾಪುರದ ನುಗತಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ವಿದ್ಯಾಶ್ರೀ ಅವರ ಮದುವೆ ನಡೆದಿತ್ತು. ಮದುವೆಯ ಮುಂಚೆ ಮಂಜುನಾಥ್ ಅವರು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಂಚೆ ಮೂಲಕ ಆಮಂತ್ರಣ ಪತ್ರಿಕೆ ಕಳುಹಿಸಿ ಕೊಟ್ಟಿದ್ದರು. ಈಗ ಅವರ ಕಚೇರಿಯಿಂದ ವಿಶೇಷವಾದ ಶುಭಾಶಯ ಪತ್ರ ನವದಂಪತಿಗಳಿಗೆ ಅಂಚೆ ಮೂಲಕ ತಲುಪಿದ್ದು ನವದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ.
ಹವ್ಯಾಸಿ ಬರಹಗಾರರು ಯುವ ಸಾಹಿತಿಯೂ ಆಗಿರುವ ಮಂಜುನಾಥ್ ಮದುವೆ ಎಂಬುದು ಒಬ್ಬ ಮನುಷ್ಯನ ಪ್ರಮುಖ ಘಟ್ಟ ಹಾಗೂ ಅತೀವ ಸಂತಸದ ಕ್ಷಣಗಳು ಆ ಕ್ಷಣಗಳಿಗೆ ನಮ್ಮ ಹಿತೈಷಿಗಳು ಬಂಧು ಮಿತ್ರರು ಹಾಜರಿರುವುದು ಸಾಮಾನ್ಯ. ಅವರೆಲ್ಲರೂ ಮದುವೆಗೆ ಬಂದು ಹಾರೈಸುತ್ತಾರೆ. ಆದರೆ ವಿಭಿನ್ನವಾಗಿರಲಿ ಎಂದು ಅನಿರೀಕ್ಷಿತವಾಗಿ ನಮ್ಮ ಮಾನ್ಯ ಪ್ರಧಾನಮಂತ್ರಿಗಳಿಗೆ ಆಮಂತ್ರಣ ಕಳಿಸಿದ್ದೆ ಈಗ ಅವರ ಆರ್ಶೀವಾದದೊಂದಿಗೆ ಶುಭಾಶಯ ಪತ್ರ ತಲುಪಿದ್ದು ಬಹಳಷ್ಟು ಖುಷಿ ತಂದಿದೆ ಎನ್ನುತ್ತಾರೆ ನವದಂಪತಿ ಮಂಜುನಾಥ್ ವಿದ್ಯಾಶ್ರೀ ಅವರು. ತಮ್ಮ ದೇಶದ ಪ್ರಧಾನಮಂತ್ರಿಗಳ ಈ ಶುಭಾಶಯ ಪತ್ರ ಆ ಮೂಲಕ ದೇಶದ ಸಾಮಾನ್ಯ ಪ್ರಜೆಯನ್ನು ಗುರ್ತಿಸುವ ಸಾಮಾಜಿಕವಾಗಿ ಬೆಸೆದುಕೊಳ್ಳುವ ಇಂತಹ ನಡೆಗೆ ಪ್ರಧಾನಮಂತ್ರಿ ಮೋದಿ ಅವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




















