ಬಳ್ಳಾರಿ / ಕಂಪ್ಲಿ : ವಿಬಿ-ಜಿ ರಾಮ್‌ಜಿ ಯೋಜನೆಯು ಗ್ರಾಮೀಣ ಜನತೆಗೆ ಅನುಕೂಲವಾಗಿದ್ದು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಾ. ಪಂ. ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಕೆ.ಎಸ್.ಮಲ್ಲನಗೌಡ ಹೇಳಿದರು.
ದೇವಲಾಪುರ ಗ್ರಾ. ಪಂ. ಆವರಣದಲ್ಲಿ ವಿಬಿ-ಜಿ ರಾಮ್‌ಜಿ ಯೋಜನೆಯ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 125ಕೂಲಿದಿನಗಳು ದೊರಕಲಿದ್ದು, ಲಿಂಗ ತಾರತಮ್ಯವಿಲ್ಲದೆ 382ರೂ. ದಿನಗೂಲಿ ನೀಡಲಾಗುವುದು. ಗ್ರಾಮೀಣ ಜನತೆ ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಸ್ಥಳೀಯವಾಗಿ ಉದ್ಯೋಗ ದೊರಕಿಸಿ ಕೊಡಲಾಗುವುದು.
ಜಲ ಸಂಬಂಧಿತ 107ಕಾಮಗಾರಿ, ಗ್ರಾಮೀಣ ಮೂಲ ಸೌಕರ್ಯಗಳ 90ಕಾಮಗಾರಿ, ಜೀವನೋಪಾಯಕ್ಕೆ ಸಂಬಂಧಿಸಿದ 86 ಕಾಮಗಾರಿ, ತೀವ್ರ ಹವಾಮಾನ ಘಟನೆಗಳ ಶಮನದ 35ಕಾಮಗಾರಿ ಸೇರಿ ಒಟ್ಟಾರೆ 318ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣರು ಆರ್ಥಿಕ ಸ್ವಾವಲಂಬನೆಗೆ ವಿಬಿ-ಜಿ ರಾಮ್‌ಜಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು.
ಪಿಡಿಒ ಮಲ್ಲಿಕಾರ್ಜುನ, ತಾಲೂಕು ಐಇಸಿ ಸಂಯೋಜಕ ಎಚ್.ಹನುಮೇಶ, ತಾಂತ್ರಿಕ ಸಂಯೋಜಕ ಸಂಗಮೇಶ, ಸಾಮಾಜಿಕ ಲೆಕ್ಕ ಪರಿಶೋಧನಾ ಸಂಯೋಜಕ ಗೌರಿದೇವಿ, ಆಂಜನೇಯ ಸೇರಿದಂತೆ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















