ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶವ ಸಂರಕ್ಷಣಾ ಫ್ರೀಜರ್ ಪೆಟ್ಟಿಗೆ ವಿತರಣೆ

ಬಳ್ಳಾರಿ / ಕಂಪ್ಲಿ : ಇಲ್ಲಿನ ಸ್ಥಳೀಯ ಕೋಟೆಯ ಜುಮ್ಮಾ ಮಸೀದಿಗೆ ಶುಕ್ರವಾರ ಶಾಸಕರಾದ ಜೆ.ಎನ್. ಗಣೇಶ್ ಅವರ ಮನವಿಯ ಮೇರೆಗೆ, ಮಾಜಿ ಸಚಿವ ಹಾಗೂ ಶಾಸಕ ಬಿ. ಝೆಡ್ ಜಮೀರ್ ಅಹ್ಮದ್‌ ಖಾನ್ ರವರ ಆದೇಶ ಮೇರೆಗೆ ಅಲ್ಪಸಂಖ್ಯಾತ ಹಾಗೂ ವಕ್ ಬೋರ್ಡ್ ಅಭಿವೃದ್ಧಿ ಅನುದಾನದ ಅಡಿಯಲ್ಲಿ, ಬಡ ಸಾರ್ವಜನಿಕರ ಅನುಕೂಲಕ್ಕಾಗಿ ಜುಮ್ಮಾ ಮಸೀದಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಕೆ. ಶ್ರೀನಿವಾಸರಾವ್ ( ವಾಸಪ್ಪ ) ಶವ ಸಂರಕ್ಷಣಾ ಫ್ರೀಜರ್ ಪೆಟ್ಟಿಗೆಯನ್ನು ಹಸ್ತಾಂತರಿಸಿ ನಂತರ ಮಾತನಾಡಿ, ಪ್ರತಿಯೊಬ್ಬರೂ ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮನ್ನು ತೊಡಿಗಿಸಿಕೊಂಡು ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು, ಈ ಕೊಡುಗೆಯು ಕ್ಷೇತ್ರದ ಸರ್ವಧರ್ಮ ಸಮನ್ವಯತೆ ಮತ್ತು ಕೋಮು ಸೌಹಾರ್ದತೆಗೆ ಉತ್ತಮ ಉದಾಹರಣೆಯಾಗಿದೆ ಎಂದು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ಎನ್. ಹಬೀಬಿ ರೆಹಮಾನ್ ಮಾತನಾಡಿ, ಶಾಸಕರು ನೀಡಿದ ಫ್ರೀಜರ್ ಪೆಟ್ಟಿಗೆಯನ್ನು ಸ್ವಚ್ಛತೆಯಿಂದ ಕಾಪಾಡಿ ಕೊನೆಯ ವಿಧಿ ವಿಧಾನಗಳ ಸಮಯದಲ್ಲಿ, ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಸ್ಥಳೀಯ ಮುಸ್ಲಿಂ ಸಮುದಾಯದವರು ಮೃತರಿಗೆ ಸುರಕ್ಷಿತವಾಗಿ ಸಂರಕ್ಷಿಸಿಡಲು ಈ ಉಚಿತ ಸೌಲಭ್ಯ ನೆರವಾಗಲಿದೆ. ಇಂತಹ ಜನಪರ ಕಾರ್ಯವನ್ನು ಮಾಜಿ ಸಚಿವರು, ಶಾಸಕರು ನಿರ್ವಹಿಸಿದ್ದಾರೆ ಅವರಿಗೆ ಎಲ್ಲಾ ಮುಸ್ಲಿಂ ಸಮಾಜದ ಪರವಾಗಿ ಅಭಿನಂದನೆಗಳು ಎಂದು ತಿಳಿಸಿದರು.

ಮಸೀದಿಯ ಆಡಳಿತ ಮಂಡಳಿಯ ಉಸ್ತುವಾರಿಯಲ್ಲಿ ಈ ಫ್ರೀಜರ್ ಪೆಟ್ಟಿಗೆಯನ್ನು ಮುಸ್ಲಿಂ ಸಾರ್ವಜನಿಕರ ಬಳಕೆಗೆ ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ವಿರುಪಾಕ್ಷಿ, ಮುಖಂಡರಾದ ಉಸ್ಮಾನ್ ಸಾಬ್, ಕೆ. ಮೆಹೆಮೂದ್, ವಾಹಿದಸಾಬ್, ಗನಿಸಾಬ್, ಲಡ್ಡು ಹೊನ್ನೂರ್ ವಲಿ, ಬಡಿಗೇರ್ ಆಜೀಜ್ ಸಾಬ್, ಬಿ. ಜಾಫರ್ ಸಾಧಿಕ್, ಬಾಗ್ಲಿ ಮಕಬುಲ್, ಮುಜಾವರ್ ಭಕ್ಸಿಸಬ್, ಆರ್. ಜಿಲಾನ್, ಸುಭಾನ್, ಪಿ. ಮೈನುದ್ದಿನ,
ಕೆ. ಶಬ್ಬಿರ, ಪಟ್ಟೆದ ಗೌಸ್ ಸಾಬ್, ಟಿ. ಅಬ್ದುಲ್, ಚಟ್ನಿ ಕರೀಂಸಾಬ್ ಸೇರಿದಂತೆ ಇತರರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!