ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

DJ ಸಂಭ್ರಮದ ಬದಲಾಗಿ ರೋಗಿಗಳ ಮೊಗದಲ್ಲಿ ನಗು ಮೂಡಿಸಿದ ಯುವಕರು

ಈದ್ ಮಿಲಾದ್ ಅಂಗವಾಗಿ ಹಿರೇವಂಕಲಕುಂಟಾ ನೌಜವಾನ್ ಕಮಿಟಿಯಿಂದ ಮಾನವೀಯ ಸೇವೆ

ಯಲಬುರ್ಗಾ: ಇಂದಿನ ದಿನಗಳಲ್ಲಿ ಈದ್ ಮಿಲಾದ್ ಸೇರಿದಂತೆ ಹಬ್ಬಗಳನ್ನು ಕೆಲವರು ಡಿಜೆ, ಸಂಭ್ರಮ ಹಾಗೂ ಮೆರವಣಿಗೆಗಳ ಮೂಲಕ ಆಚರಿಸುವುದು ಸಾಮಾನ್ಯವಾಗಿದೆ. ಆದರೆ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಮುಸ್ಲಿಂ ಯುವಕರು ಇದಕ್ಕೆ ವಿಭಿನ್ನವಾಗಿ, ಮಾನವೀಯತೆ ಮತ್ತು ಸಾಮಾಜಿಕ ಸೇವೆಯ ಮೂಲಕ ಈದ್ ಮಿಲಾದ್ ಆಚರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಗ್ರಾಮದ ಮುಸ್ಲಿಂ ನೌಜಾವಾನ್ ಕಮೀಟಿ ವತಿಯಿಂದ 20ರಿಂದ 30ಕ್ಕೂ ಹೆಚ್ಚು ಯುವಕರು ಸ್ವಯಂಪ್ರೇರಣೆಯಿಂದ ಹಣವನ್ನು ಸಂಗ್ರಹಿಸಿ, ಈದ್ ಮಿಲಾದ್ ಪ್ರಯುಕ್ತ ರೋಗಿಗಳಿಗೆ ಹಣ್ಣು-ಹಂಪಲು ಹಾಗೂ ಅಗತ್ಯ ವಸ್ತುಗಳನ್ನು ಒಳಗೊಂಡ ಕಿಟ್‌ಗಳನ್ನು ಸಿದ್ಧಪಡಿಸಿದರು. ಸೇಬು, ಕಿತ್ತಳೆ, ದಾಳಿಂಬೆ, ಬ್ರೆಡ್, ಬಿಸ್ಕತ್ ಹಾಗೂ ಹಾಲು ಒಳಗೊಂಡ ಕಿಟ್‌ಗಳನ್ನು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ, ಎಸ್.ಎಸ್. ಆಸ್ಪತ್ರೆ, ಗಾಣದಾಳ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ವಿತರಿಸಿದರೂ ಮುಸ್ಲಿಂ ಸಮಾಜದ ಹಿರಿಯರ ಸಹಯೋಗದಲ್ಲಿ ನಡೆದ ಈ ಸೇವಾ ಕಾರ್ಯದಲ್ಲಿ ಯುವಕರು ಮಾತ್ರವಲ್ಲದೆ, ಸಮಾಜದ ಹಿರಿಯರು ಹಾಗೂ ಮುದ್ದು ಮಕ್ಕಳು ಕೂಡ ಉತ್ಸಾಹದಿಂದ ಭಾಗವಹಿಸಿದರು.
ಈ ಮೂಲಕ ಈದ್ ಮಿಲಾದ್ ಆಚರಣೆಗೆ ಹೊಸ ಅರ್ಥ ನೀಡಿದ ಯುವಕರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಾಮಿಯಾ ಮಸೀದಿ ಹಿರೇವಂಕಲಕುಂಟಾ ಅಧ್ಯಕ್ಷರಾದ ಲಾಲ್ ಸಾಬ್, “ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನವಾದ ಈದ್ ಮಿಲಾದ್ ಪ್ರಯುಕ್ತ ನಮ್ಮ ಊರಿನ ಮುಸ್ಲಿಂ ಯುವಕರು ಒಗ್ಗಟ್ಟಾಗಿ ಹಣ ಸಂಗ್ರಹಿಸಿ, ನಮ್ಮ ಹಿರಿಯರ ಕೈಯಾರೆ ರೋಗಿಗಳಿಗೆ ಹಣ್ಣು-ಹಂಪಲು, ಹಾಲು ಹಾಗೂ ಆಹಾರ ಸಾಮಗ್ರಿಗಳನ್ನು ನೀಡಿರುವುದು ನಮಗೆ ತುಂಬಾ ಸಂತೋಷ ಹಾಗೂ ಹೆಮ್ಮೆಯ ವಿಷಯವಾಗಿದೆ. ಪೈಗಂಬರ್ ಅವರ ಜೀವನದ ಪ್ರಮುಖ ಸಂದೇಶಗಳಲ್ಲಿ ಮಾನವೀಯತೆ, ದಯೆ, ಸಹಾಯ ಮತ್ತು ಸಹೋದರತ್ವವೂ ಪ್ರಮುಖವಾಗಿವೆ. ಅದನ್ನು ನಮ್ಮ ಯುವಕರು ತಮ್ಮ ಕಾರ್ಯದ ಮೂಲಕ ತೋರಿಸಿದ್ದಾರೆ. ಇದೇ ರೀತಿಯಲ್ಲಿ ನಮ್ಮ ಯುವಕರು ಮುಂದೆಯೂ ಸಾಮಾಜಿಕ ಸೇವಾ ಕಾರ್ಯಗಳನ್ನು ಮುಂದುವರಿಸಬೇಕು” ಎಂದು ಹೇಳಿದರು.
ಮೌಲಾನಾ ಸಾದ್ ಅವರು ಮಾತನಾಡಿ, ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಮಹತ್ವ ಹಾಗೂ ಅವರ ಜೀವನ, ಸರಳತೆ, ದಯೆ, ಸಹಾನುಭೂತಿ, ಬಡವರ ಹಾಗೂ ಸಂಕಷ್ಟದಲ್ಲಿರುವವರ ಮೇಲಿನ ಕಾಳಜಿ ಕುರಿತು ವಿವರಿಸಿದರು.
“ಪೈಗಂಬರ್ ಅವರ ಆದರ್ಶಗಳನ್ನು ಕೇವಲ ಮಾತಿನಲ್ಲಿ ಸ್ಮರಿಸುವುದಕ್ಕಿಂತ, ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡುವುದೇ ನಿಜವಾದ ಗೌರವ. ರೋಗಿಗಳ ನೋವಿನಲ್ಲಿ ಭಾಗಿಯಾಗಿ ಅವರಿಗೆ ನೆರವಾಗಿರುವ ಯುವಕರ ಕಾರ್ಯ ಶ್ಲಾಘನೀಯ” ಎಂದು ಯುವಕರಿಗೆ ಸ್ಫೂರ್ತಿ ತುಂಬಿದರು.
ಈ ಸಂದರ್ಭದಲ್ಲಿ ಶ್ಯಾಮಿದ್ ಸಾಬ್ ಗುಬ್ಬಿ,ನಜೀರ್ ಮಿಯಾ ಕುಷ್ಟಗಿ,ಮೌಲಾ ಸಾಬ್ ಮುಲ್ಲಾರ್, ಹುಸೇನ್ ಸಾಬ್ ಬಳಿಗೇರ,ಲಾಲ್ ಸಾಬ್ ಟಪ್ಪದ, ಮುನೀರ್ ಸಾಬ್ ಕುಷ್ಟಗಿ, ಸದ್ದಾಂ ಹುಸೇನ್ ಅತ್ತಾರ, ಖಾಸಿಂ ಅಲಿ ಗುಬ್ಬಿ, ಅಶ್ರಫ್ ಅಲಿ ಕುಷ್ಟಗಿ, ಹೊನ್ನೂರು ಸಾಬ್ ಮುಲ್ಲಾರ್, ಮೂರ್ತಜಾ ಸಾಬ್ ಅತ್ತಾರ್,ರಾಜಾ ಸಾಬ್ ಕಟ್ಟಿಮನಿ,ಬಾಷಾ ಅತ್ತಾರ್, ಅಜ್ಮೀರ್ ಮುಲ್ಲಾರ್,ರಾಜಾ ಸಾಬ್ ಮುಲ್ಲಾರ್,ಮೆಹಬೂಬ್ ಕಟ್ಟಿಮನಿ, ಹುಸೇನ್ ಬಾಷಾ ಬಳಿಗೇರ, ಅಲ್ಲಬಕ್ಷ ಅತ್ತಾರ್,ಅಸ್ಲಾಂ ಅತ್ತಾರ್, ಶಾಕಿರ್ ಕಟ್ಟಿಮನಿ, ಶರೀಫ್ ಸಾಬ್ ಕಟ್ಟಿಮನಿ, ಶಾಮಿದ್ ಸಾಬ್ ಅತ್ತಾರ್,ಮೌಲಾಸಾಬ್ ಕಟ್ಟಿಮನಿ,ರಾಜಾ ಸಾಬ್ ಮುಲ್ಲಾರ್, ಶರೀಫ್ ಸಾಬ್ ಕಟ್ಟಿಮನಿ, ಬಾರೆ ಸಾಬ್, ಹುಸೇನ್ ಬಾಷಾ ಗುಬ್ಬಿ,ಮಹಮ್ಮದ್ ಉಪ್ಪಿನ ಬೆಟಗೇರಿ ಸೇರಿದಂತೆ ಮುಸ್ಲಿಂ ಸಮಾಜದ ಹಿರಿಯರು, ನೌಜಾವಾನ್ ಕಮೀಟಿಯ ಯುವಕರು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.ಹಬ್ಬದ ಸಂಭ್ರಮವನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ, ಸಂಕಷ್ಟದಲ್ಲಿರುವವರೊಂದಿಗೆ ಸಂತೋಷ ಹಂಚಿಕೊಂಡು, ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಈದ್ ಮಿಲಾದ್ ಆಚರಿಸಿದ ಹಿರೇ ವಂಕಲಕುಂಟಾ ಗ್ರಾಮದ ಯುವಕರ ಸಾಮಾಜಿಕ ಕಳಕಳಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!