ಬೀದರ್ ಜಿಲ್ಲೆಯ ಔರಾದ್ ಹಾಗೂ ಕಮಲಾ ನಗರ ಎರಡೂ ತಾಲೂಕನ್ನು ಬರಪೀಡಿತ ಪಟ್ಟಿಯಲ್ಲಿ ಸೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೈನ್ಯ ವತಿಯಿಂದ ಇತ್ತೀಚೆಗೆ ಪಟ್ಟಣದ ಎಪಿಎಂಸಿ ವೃತ್ತದಲ್ಲಿ ಬೀದರ್ ನಾಂದೇಡ್ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನಾಕಾರರು ತಹಸೀಲ್ದಾರ್ ಮಹೇಶ್ ಪಾಟೀಲ್ ಅವರ ಮೂಲಕ ಮನವಿ ಸಲ್ಲಿಸಿದರು.
ಮುಂಗಾರು ಹಂಗಾಮು ಆರಂಭವಾದ ದಿನದಿಂದ ಇಲ್ಲಿಯವರೆಗೆ ವಾಡಿಕೆಯಂತೆ ಮಳೆ ಆಗದ ಕಾರಣ ಬೆಳೆಗಳು ಒಣಗುತ್ತಿವೆ ಎಂದು ದೂರಿದರು. ಆಗಸ್ಟ್ ಮೊದಲ ವಾರದ ಬಿತ್ತನೆ ಬೆಳೆಗಳು ಮಳೆ ಕೊರತೆಯಿಂದ ಒಣಗುತ್ತಿರುವುದರಿಂದ ರೈತರು ತೀವ್ರ ಸಂಕಷ್ಟ ಸಿಲುಕಿದರೆಂದು ಮನವಿಯಲ್ಲಿ ತಿಳಿಸಲಾಗಿದೆ ಸರ್ಕಾರ ಕೂಡಲೇ ಕಮಲನಗರ ಮತ್ತು ಔರಾದ ತಾಲೂಕುಗಳನ್ನು ಬರಪೀಡಿತ ತಾಲ್ಲೂಕುಗಳನ್ನಾಗಿ ಘೋಷಿಸಬೇಕು, ಪ್ರತಿ ಎಕರೆಗೆ ಬರ ಪರಿಹಾರ ನೀಡುವುದರ ಜೊತೆ ರೈತರ ಸಾಲಮನ್ನಾ ಮಾಡಬೇಕು ಎಂದು ರೈತ ಸಂಘದ ಆಗ್ರಹಿಸಿದೆ ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರಕಾರ ತುತು೯ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರೈತರು, ಜಾನುವಾರು ಹಾಗೂ ಎತ್ತಿನ ಬಂಡಿಗಳೊಂದಿಗೆ ರಸ್ತೆಗಳಿಗೆ ಇಳಿದು ಉಗ್ರ ಹೋರಾಟ ನಡೆಸಲಾಗುವುದು ಯಾವುದೇ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರೈತರ ಸಂಘದ ಜಿಲ್ಲಾಧ್ಯಕ್ಷ ಶ್ರೀಮಂತ ಬಿರಾದಾರ್, ತಾಲೂಕ ಅಧ್ಯಕ್ಷ ಪ್ರಕಾಶ್ ಬಾವಗೆ , ಕಾರ್ಯದರ್ಶಿ ಸಂಜು ರೆಡ್ಡಿ ಗೌರವಾಧ್ಯಕ್ಷ ಸತ್ಯವಾನ ಪಾಟೀಲ್ ಬಾಬು ಜಗದ ಕಲ್ಲಪ್ಪ ದೇಶಮುಖ ಝರಣಪ್ಪ ದೇಶಮುಖ್ ರಾಜಹo ಸಿ ಶೆಟ್ಕರ್ ವಿಜಯ್ ಕುಮಾರ್ ಶೆಟ್ಟಿ ಕಾರ್ ಶಿವನoದ ಹಂಗರಗಿ ಗೋವಿಂದ ಇಂಗಳ ಪ್ರಶಾಂತ್ ಖಾನಾಪುರ ಗೋವಿಂದ ಲೋಣಿ ಸೇರಿದಂತೆ ತಾಲೂಕಿನ ರೈತರು ಉಪಸ್ಥಿತರಿದ್ದರು.
ವರದಿ ಸಂಗಮೇಶ ಚಿದ್ರೆ




















