ನಂಜನಗೂಡು : ಕೆ ಆರ್ ನಗರ ತಾಲೂಕಿನ ಕಂಚುಗಾರ ಕೊಪ್ಪಲಿನ ಹಾಗೂ ಗ್ರಾಮದ ಹೆಮ್ಮೆಯ ಕರುನಾಡ ಕುಮಾರಿ ಪ್ಯಾರಾ ಅಥ್ಲೆಟ್ ಕೆ ಎಸ್ ಶಿಲ್ಪಾ ಅವರು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಗ್ರಾಮೀಣ ಭಾಗದ ಇಂತಹ ಸಾಧಕಿಯನ್ನು ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಆಯ್ಕೆ ಮಾಡಬೇಕೆಂಬುದು ಜಿಲ್ಲಾ ನಾಮಧಾರಿಗೌಡ ಸಮುದಾಯದ ಒತ್ತಾಯವಾಗಿದೆ ಎಂದು ನಾಮಧಾರಿ ಗೌಡ ಸಮುದಾಯದ ಶಿಕ್ಷಕರು ಸಮಾಜ ಸೇವಕರು ಆದ ನಂಜನಗೂಡಿನ ಸತ್ಯನಾರಾಯಣ ಪ್ರಸಾದ್ ಅವರ ಒತ್ತಾಯವಾಗಿದೆ.
ಈ ಕುರಿತು ಮಾಹಿತಿ ನೀಡಿದ ಅವರು ದಸರಾ ಉದ್ಘಾಟಕರ ಆಯ್ಕೆಯನ್ನು ರಾಜ್ಯ ಸರ್ಕಾರ ಮತ್ತು ದಸರಾ ಉನ್ನತ ಮಟ್ಟದ ಸಮಿತಿ ನಿರ್ಧರಿಸುತ್ತದೆ ಮಹೋತ್ಸವಕ್ಕೆ ಆಹ್ವಾನಿಸಬೇಕು ಎಂದು ಮನವಿ ಮಾಡಿದ್ದಾರೆ. ವಿಕಲಚೇತನರಾದರೂ ಶಿಲ್ಪಾವರು ಕ್ರೀಡಾ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ ದಿಟ್ಟ ಮಹಿಳೆಯಾಗಿದ್ದಾರೆ. ಅವರಿಗೆ ದಸರಾ ಮಹೋತ್ಸವದ ಉದ್ಘಾಟನೆಯ ಗೌರವ ಸಿಕ್ಕರೆ ಅದು ಇಡೀ ಕ್ರೀಡಾ ಜಗತ್ತಿಗೆ, ವಿಕಲಚೇತನರಿಗೆ ಮತ್ತು ಮಹಿಳಾ ಕುಲಕ್ಕೆ ದೊಡ್ಡ ಹೆಮ್ಮೆಯಾಗುತ್ತದೆ ಎಂದು ಹೇಳಿದ್ದಾರೆ.
- ಕರುನಾಡ ಕಂದ ಸುದ್ದಿ




















