ಆಕರ್ಷಕ ಬಣ್ಣದ ದಾಳಿಂಬೆ ತೊಗಟೆಯ ತುಣುಕುಗಳು
ಹರಿದ್ರ ವರ್ಣದ ಏಲಕ್ಕಿ ಬಾಳೆ ಸಿಪ್ಪೆಯ ತುಕಡಿಗಳು
ಸೀಳಿದ ಬಾಳೆ ಎಲೆಯ ಪುಟ್ಟ ಪುಟ್ಟ ಗರಿಗಳು
ಸೃಜನಶೀಲತೆಯ ಭಾವನಾ ಸಂಗಮದ ಪರಿಕರಗಳು
ಕ್ರಿಯಾಶೀಲತೆಯಲಿ ಜೋಡಿಸಲಾಗಿ ಸುಲಲಿತ ಚಿತ್ತಾರವು
ಪದ ಸಂಯೋಜನೆ ಮಾಡಲು ಉಗಮಿಸಿರುವ ಕಾವ್ಯವು
ನಿತ್ಯ ನೋಡಿ ಓದುವ ಸುಮನಗಳಿಗಿದು ಅರ್ಪಿತವು
ಕಲಾಪೋಷಕರಿಗೆ ಅಭಿಮಾನದ ಶುಭೋದಯವು
- ಲಲಿತಾ ಕೆ ಆಚಾರ್, ಬೆಂಗಳೂರು.




















