ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

41 ದಿನ ಪೂರೈಸಿದ ಅಹೋರಾತ್ರಿ ಧರಣಿ ಸತ್ಯಾಗ್ರಹ

ಕೊಪ್ಪಳ:ಗಣೇಶ್ ನಗರದ ಆಶ್ರಯ ಕಾಲೋನಿಯಲ್ಲಿ ವಾಸವಿದ್ದ ಶೆಡ್ ನ ಜಾಗವನ್ನು ಈಗ ಬೇರೆಯವರ ಹೆಸರಿಗೆ ನೋಂದಾಯಿಸಲಾಗಿದೆ ಎಂದು ಅಂಗವಿಕಲ ಚನ್ನಬಸಪ್ಪ ಯಲಿಗಾರ ಇಲ್ಲಿನ ಜಿಲ್ಲಾಡಳಿತ ಭವನದ ಮುಂಬಾಗದಲ್ಲಿ ವಿವಿಧ ಸಂಘಟನೆಗಳ ಜೊತೆಗೂಡಿ ನಡೆಸುತ್ತಿರುವ ಪ್ರತಿಭಟನೆ ಈಗ 41 ದಿನ ಪೂರ್ಣಗೊಳಿಸಿದೆ.
“ಖಾಲಿ ನಿವೇಶನ ಸಂಖ್ಯೆ 52ರಲ್ಲಿ ಶೆಡ್ ಹಾಕಿಕೊಂಡು ಎರಡೂವರೆ ದಶಕಗಳಿಂದ ಕುಟುಂಬ ಸಮೇತವಾಗಿ ವಾಸಿಸುತ್ತಿದ್ದೇನೆ.ಕೊಪ್ಪಳ ನಗರಸಭೆ 2019ರಲ್ಲಿ ಮೂಲ ದಾಖಲೆ ತಂದುಕೊಡಿ ಎಂದು ಕೊಟ್ಟ ನೋಟಿಸ್ ಗೆ ಉತ್ತರ ನೀಡಿ ಅದೇ ನಿವೇಶನ ಮಂಜೂರು ಮಾಡುವಂತೆ ಮನವಿ ಮಾಡಿದ್ದೆ ಮನವಿ ಕಡೆಗಣಿಸಿ ಶಾಸಕರು ತಮ್ಮದೇ ಸಮುದಾಯದ ಮಹಿಳೆಯೊಬ್ಬರ ಹೆಸರಿಗೆ ನಿವೇಶನ ಮಂಜೂರು ಮಾಡಿದ್ದಾರೆ” ಎಂದು ಚನ್ನಬಸಪ್ಪ ಯಲಿಗಾರ ಆರೋಪಿಸಿದರು .
‘ನನ್ನ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಲವು ಪ್ರತಿಭಟನೆ ನಡೆಸುತ್ತಿದ್ದರೂ ಯಾವ ಅಧಿಕಾರಿಗಳು ಕಿವಿಗೊಡುತ್ತಿಲ್ಲ,ಖಾಲಿ ಇರುವ ನಿವೇಶನ ನನ್ನ ಹೆಸರಿಗೆ ಮಂಜೂರು ಮಾಡಿಕೊಡಬೇಕು’ ಎಂದರು .
ನಗರ ಸಭೆಯವರು ರಸ್ತೆಗೆ ಹೊಂದಿಕೊಂಡಿರುವ ಲಕ್ಷಾಂತರ ರೂಪಾಯಿ ಬೆಲೆಬಾಳುವ ಜಾಗವನ್ನು ಲಂಚ ಪಡೆದು ಮತ್ತು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕಳೆದ ವರ್ಷ ವ್ಯಕ್ತಿಯೊಬ್ಬರಿಗೆ ನೀಡಿದ್ದಾರೆ,ಲಂಚ ಕೊಟ್ಟು ನಿವೇಶನ ಪಡೆದ ವ್ಯಕ್ತಿ ಚನ್ನಬಸಪ್ಪ ಕುಟುಂಬದ ಮೇಲೆ ದೌರ್ಜನ್ಯ ಮಾಡಿ ಅರ್ಧದಷ್ಟು ಶೆಡ್ ಕಿತ್ತು ಹಾಕಲಾಗಿದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷರು,ಕಾರ್ಯದರ್ಶಿಗಳು ಆರೋಪಿಸಿದ್ದಾರೆ.

ವರದಿ-ಮಲ್ಲಿಕ್ ಕೊಪ್ಪಳ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!