ಉಷ್ಣವಲಯದ ಡ್ರ್ಯಾಗನ್ ಹಣ್ಣಿನ ಕವಚವು
ವರ್ಣರಂಜಿತ ನಿಸರ್ಗ ಕೊಡುಗೆಯ ಚಮತ್ಕಾರವು
ಬಿಡಿಸಿ ಹರಡಲು ಮೂಡಿಹ ಕ್ರಿಯಾಶೀಲ ಚಿತ್ತಾರವು
ಸಿಂಗಾರದಲಿ ನಲಿದಿರುವ ತುಂಬೆಯಾ ಪುಷ್ಪವು
ಜೊತೆಯಲಿ ಸೇರಿವೆ ಹಸಿರೆಲೆಯ ತೋರಣ
ನಗುವ ಸಾರುತಿದೆ ಗುಲಾಬಿ ವರ್ಣದ ಕಿರಣ
ಪದಪುಂಜಗಳಲಿ ಉಗಮ ಕಾವ್ಯದಾ ಹೂರಣ
ಶುಭ ಮುಂಜಾವಲಿ ತಮ್ಮತ್ತ ಸಾಗುತಿದೆ ಪಯಣ
- ಲಲಿತಾ ಕೆ ಆಚಾರ್, ಬೆಂಗಳೂರು




















