ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಸಮಾರಂಭ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರವಿಹಾಳ ಪಟ್ಟಣದ ಸರಕಾರಿ ಪ್ರಾಥಮಿಕ ಪ್ರೌಢ ಶಾಲೆಯಲ್ಲಿ ರವಿವಾರ 2007 ನೇ ಸಾಲಿನ 10ನೇ ತರಗತಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭ ನಡೆಯಿತು.

ಈ ಸಂದರ್ಭದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಹಳೆಯ ವಿದ್ಯಾರ್ಥಿಗಳು ಗುರುಗಳನ್ನು ಕುಂಭ ಮೇಳದ ಮೂಲಕ ಪುಷ್ಪಾರ್ಚನೆ ಮಾಡಿ ಹರ್ಷದಿಂದ ಸ್ವಾಗತಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಸೋಮಲಿಂಗಪ್ಪ ನೇತೃತ್ವದಲ್ಲಿ ಎಲ್ಲಾ ಶಿಕ್ಷಕರು ಜೊತೆಗೂಡಿ ಉದ್ಘಾಟಿಸಿದರು.

ಕಾರ್ಯಕ್ರಮದ ಅದ್ಯಕ್ಷತೆವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಸೋಮಲಿಂಗಪ್ಪ 2007ನೇ ಸಾಲಿನ 10ನೇ ತರಗತಿಯ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಈ ಗುರುವಂದನಾ ಕಾರ್ಯಕ್ರಮ ತುಂಬಾ ಮೆಚ್ಚುವಂತಹುದು,ಈ ಕಾರ್ಯಕ್ರಮದ ಮೂಲಕ ಎಲ್ಲಾ ಗುರುಗಳನ್ನು ಒಂದೇ ವೇದಿಕೆ ಕರೆತಂದು ನಮ್ಮ ಸಂಗಮ ಮಾಡಿದ್ದೀರಿ ಅದೇರೀತಿ ನೀವುಗಳೆಲ್ಲರೂ ಸೇರಿ ಈ ಕಾರ್ಯಕ್ರಮಕ್ಕೆ ಸ್ನೇಹ ಸಮ್ಮಿಲನದ ಮೂಲಕ ಮೆರುಗು ನೀಡಿ ನಿಮ್ಮ ತರಗತಿಯಲ್ಲಿನ ಸಿಹಿಕಹಿ ಘಟನೆಗಳನ್ನು ನೆನಪು ಮಾಡಿಕೊಂಡು ಗುರುಗಳಿಗೆ ಒಂದು ಆತ್ಮೀಯ ಭಾವನೆ ತೋರುವ ಮೂಲಕ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿದರಿ.ನೋಡಿ ಮೊದಲಿಗೆ ತಂದೆ ತಾಯಿಯೇ ಗುರುಗಳು ನಂತರದಲ್ಲಿ ಶಿಕ್ಷಕರು ಈ ಮೂರನೇ ವ್ಯಕ್ತಿಗೆ ನೀವು ಎಷ್ಟು ಗೌರವ ಕೊಡುತ್ತಿದ್ದೀರಿ ಈ ಮನೋಭಾವ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಇರಬೇಕು,ಪ್ರೀತಿ, ವಾತ್ಸಲ್ಯ,ಸಂಯಮ,ಗೌರವ, ಇವೆಲ್ಲವುಗಳನ್ನು ನೀವು ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಅದು ಶಿಕ್ಷಕರಿಗೆ ಗೌರವ ತಂದಹಾಗೆ ಪ್ರತಿಯೊಬ್ಬರೂ ನಿಮ್ಮ ನಿಮ್ಮ ಜೀವನದಲ್ಲಿ ಮುಂದೆ ಬರಲು ಬರೀ ಸರಕಾರಿ ನೌಕರಿಯಿಂದ ಮಾತ್ರ ಸಾದ್ಯವಿಲ್ಲ ಅದು ನಿಮ್ಮಲ್ಲಿನ ಮಾನವೀಯತೆ, ಗೌರವ, ಪ್ರೀತಿಯಿಂದ ಸಾದ್ಯ ಅದಕ್ಕೆ ಮೊದಲು ತಂದೆ ತಾಯಿಗಳನ್ನು ಸಂತೋಷವಾಗಿ ನೋಡಿಕೊಳ್ಳಿ, ಅವರ ಮುಂದೆ ನೀವು ಯಾವ ಕೆಲಸವಾದರೂ ಪರವಾಗಿಲ್ಲ ಮಾಡಿ ಸಂತೋಷಪಡಿಸಿ ಚೆನ್ನಾಗಿ ನೋಡಿಕೊಳ್ಳಿ ಆಗ ನೀವು ತಂದೆಗೆ ತಕ್ಕ ಮಗ ಹಾಗೂ ನಮಗೆ ಒಬ್ಬ ಉತ್ತಮ ಶಿಷ್ಯ ದೊರೆತ ಹಾಗೆ ಸಂತೋಷವಾಗುತ್ತೆ ಎಂದರು.

ಇದೇ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರಿಗೂ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕರಿಗೆ ಮೆಚ್ಚುವ ಹಾಗೆ ಊಟದ ರಸದೌತಣವನ್ನೇ ನೀಡಲಾಯಿತು. ನಂತರ ಎಲ್ಲಾ ವಿದ್ಯಾರ್ಥಿಗಳು ತಮ್ಮ ಬಾಲ್ಯದ ಸವಿನೆನಪುಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು ವಿದ್ಯಾರ್ಥಿಗಳ ಮಾತುಗಳಿಗೆ ಶಿಕ್ಷಕರು ತುಂಬಾ ಸಂತೋಷಗೊಂಡು ಎಲ್ಲರಿಗೂ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಒಂದೇ ವೇದಿಕೆ ಮೇಲೆ ಭಾವಚಿತ್ರ ತೆಗೆದು ಎಲ್ಲಾ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ತುರವಿಹಾಳ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕರು ಹಾಗೂ 2007ನೇ 10ನೇ ತರಗತಿಯ ಹಳೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!