ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಅಧಿಕ ಸಂಖ್ಯೆಯಲ್ಲಿ ಮೋಟರ್ ಸೈಕಲ್ ಕಳ್ಳತನ ಆಗುತ್ತಿದ್ದು ,ಇವುಗಳನ್ನು ಪತ್ತೆ ಮಾಡುವ ಕುರಿತು ವೆಂಕಟಪ್ಪ ನಾಯಕ ಡಿ. ಎಸ್. ಪಿ ಸಿಂಧನೂರು ರವರ ಮಾರ್ಗದರ್ಶನದಲ್ಲಿ ದುರುಗಪ್ಪ ಡಿ.ಪಿಐ ನಗರ ಪೊಲೀಸ್ ಠಾಣೆ, ಸಿಂಧನೂರುರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ರಾಮಪ್ಪ ಎಎಸ್ಐ, ಅದಯ್ಯ ಪಿಸಿ-67, ಸಂಗನಗೌಡ ಪಿ ಸಿ- 498, ಅನಿಲ್ ಕುಮಾರ ಪಿಸಿ-447, ಸಿದ್ದಪ್ಪ ಪಿಸಿ-30, ವಿಜಯ ಕುಮಾರ ಪಿಸಿ-60, ಮುಕ್ಕುಂದ ಪಿಸಿ-301, ಆನಂದ ಕುಮಾರ್ ಪಿಸಿ-341, ಭಾಷಾ ನಾಯ್ಕ ಎಪಿಸಿ, ಅಜೀಮ ಪಾಷಾ ಸಿ ಡಿಆರ್ ಘಟಕ, ರಾಯಚೂರು ರವರ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ಹಗಲಿರುಳು ಶ್ರಮಿಸಿ ಮೋಟಾರ್ ಸೈಕಲ್ ಕಳ್ಳತನ ಮಾಡುವ 1) ಪುನೀತ್ ತಂದೆ ರಾಮಣ್ಣ ಕಟ್ಟಿಮನಿ, ಸಾ. ಗಾಂಧಿನಗರ ಮಸ್ಕಿ, 2) ಚಿನ್ನು ತಂದೆ ಕೃಷ್ಣಪ್ಪ ಸಾ. ಗಾಂಧಿನಗರ ಮಸ್ಕಿ 3) ವೀರೇಶ್ ತಂದೆ ಜಲಂಧರ್ ಸಾ. ವೆಂಕಟೇಶ್ವರ ನಗರ ಸಿಂಧನೂರು ಇವರನ್ನು ಬಂಧಿಸಿದ್ದು ಇನ್ನೂಳಿದ್ದ ಸುರೇಶ ಈತನನ್ನು ದಸ್ತಗಿರಿ ಮಾಡುವುದು ಬಾಕಿ ಇರುತ್ತದೆ. ದಿನಾಂಕ 1.2.2023 ರಂದು ಬೆಳಗಿನ ಜಾವದ ಸಮಯದಲ್ಲಿ ಆರೋಪಿತರನ್ನು ಹಿಡಿದು ಅವರ ಕಡೆಯಿಂದ ಸಿಂಧನೂರು ನಗರ ಗಂಗಾವತಿ ನಗರ ರಾಯಚೂರು ಕನಕಗಿರಿ, ತಾವರಗೇರಾ ಕುಷ್ಟಗಿ ಜಾಲಹಳ್ಳಿ ದೇವದುರ್ಗ ಮುದುಗಲ್ ,ಸುರಪುರ, ಸಿರಿವಾರ ಮಾನ್ವಿ ಪಟ್ಟಣಗಳಲ್ಲಿ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಕಳವು ಮಾಡಿದ ಅವುಗಳ ಮೌಲ್ಯ 6,50,000/- ಕಿಮ್ಮತ್ತಿನ ವಿವಿಧ ಕಂಪನಿಯ 18 ಮೋಟರ್ ಸೈಕಲ್ ಗಳನ್ನು ಜಪ್ತಿ ಮಾಡಿಕೊಂಡು ಮೋಟರ್ ಸೈಕಲ್ ಪ್ರಕಾರಗಳನ್ನು ಬೇಧಿಸಲಾಗಿದೆ. 18 ಮೋಟರ್ ಸೈಕಲ್ ಗಳ ಪತ್ತೆ ಕಾರ್ಯವನ್ನು ಶ್ರೀ ನಿಖಿಲ್ ಬಿ ಐಪಿಎಸ್, ಎಸ್ ಪಿ ರಾಯಚೂರು ಮತ್ತು ಡಾ: ಶಿವಕುಮಾರ, ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯವನ್ನು ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದರು.




















