ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹುಡುಗರ ಗೆಳತಿ ಪುಸ್ತಕ

ಹುಡುಗರೆ
ಯೌವನದ ಗಾಳಿ ತೀವ್ರವಾಗಿ ಬೀಸುವಾಗ
ಮನಸ್ಸು ಚಂಚಲವಾಗುವುದು ಸಹಜವೇ ಸರಿ
ಆದರೆ ಆ ಚಂಚಲತೆಯನ್ನೇ ಜೀವನವೆಂದು ಭ್ರಮಿಸಬೇಡಿ.

ರಸ್ತೆಯ ಮೂಲೆಗಳಲ್ಲಿ ನಿಂತು ಹುಡುಗಿಯರ
ನಗುವಿನ ನೆರಳನ್ನು ಹಿಂಬಾಲಿಸುವುದಕ್ಕಿಂತ
ಗ್ರಂಥಾಲಯದ ಬಾಗಿಲು ತಟ್ಟಿರಿ
ಅಲ್ಲಿ ನಗುವಿಗಿಂತಲೂ ಆಳವಾದ ಜ್ಞಾನ ಅಡಗಿದೆ.

ಒಂದು ದಿನದ ಮೋಹ
ಒಂದು ಕ್ಷಣದ ಮಾತು
ಒಂದು ನೋಟದ ಕನಸು
ಇವುಗಳಿಗಿಂತ ದೊಡ್ಡದು ನಿಮ್ಮ ಭವಿಷ್ಯ.

ನೀವು ತಿರುಗುವ ದಾರಿ
ನಿಮ್ಮ ತಂದೆತಾಯಿಯ ನಿರೀಕ್ಷೆಗಳ ದಾರಿ
ನೀವು ಓದುವ ಪುಸ್ತಕ
ಅವರ ಕನಸುಗಳ ಬೆಳಕು.

ಹುಡುಗಿಯರ ಹಿಂದೆ
ಅನಾವಶ್ಯಕವಾಗಿ ಸುತ್ತುವರಿಯುವ ಹೆಜ್ಜೆಗಳು
ನಿಮ್ಮ ಗುರಿಯನ್ನೇ ಸುತ್ತುವರಿಯಲಿ
ಆ ಗುರಿ ನಿಮ್ಮನ್ನು ಎತ್ತರಕ್ಕೆ ಕರೆದೊಯ್ಯಲಿ.

ಪುಸ್ತಕದ ಪುಟಗಳಲ್ಲಿ
ಸಾವಿರ ಜೀವಿತಗಳ ಅನುಭವಗಳಿವೆ
ಅಲ್ಲಿ ಸೋಲುಗಳ ಪಾಠಗಳಿವೆ
ಅಲ್ಲಿ ಗೆಲುವಿನ ರಹಸ್ಯಗಳಿವೆ.

ಹುಡುಗರೆ
ನಿಮ್ಮ ಕಣ್ಣಲ್ಲಿ ಹೊಳಪು ಇರಲಿ
ಆ ಹೊಳಪು ಕನಸಿನದು ಆಗಲಿ,
ಆ ಕನಸು ಸಾಧನೆಯದು ಆಗಲಿ.

ಬಾಲ್ಯದಲ್ಲಿ ಕೇಳಿದ ಕಥೆಗಳು
ಯೌವನದಲ್ಲಿ ಓದಿದ ಗ್ರಂಥಗಳು
ವಯಸ್ಸಾದಾಗ ನಿಮ್ಮ ವ್ಯಕ್ತಿತ್ವವಾಗುತ್ತವೆ ನೆನಪಿರಲಿ.

ಸಮಯವನ್ನು ಪ್ರೀತಿಸಿ,
ಶ್ರಮವನ್ನು ಆರಾಧಿಸಿ,
ಪುಸ್ತಕಗಳನ್ನು ಸ್ನೇಹಿತರನ್ನಾಗಿಸಿಕೊಳ್ಳಿ.

ನಿಮ್ಮ ಹಿಂದೆ ಜನರು ಓಡಬೇಕು
ನೀವು ಯಾರನ್ನೂ ಹಿಂಬಾಲಿಸಬೇಡಿ.

ಜೀವನದ ಓಟದಲ್ಲಿ
ಹೃದಯದ ತಾಳವಲ್ಲ
ಬುದ್ಧಿಯ ಬೆಳಕು ದಾರಿ ತೋರಲಿ.

ಯಾರನ್ನಾದರೂ ಮೆಚ್ಚುವುದು ತಪ್ಪಲ್ಲ
ಆದರೆ ಅದಕ್ಕಾಗಿ ನಿಮ್ಮ ಮೌಲ್ಯವನ್ನು ಕಳೆದುಕೊಳ್ಳಬೇಡಿ ಹುಡುಗರೆ.
ನಿಮ್ಮ ಆತ್ಮಗೌರವವೇ
ನಿಮ್ಮ ದೊಡ್ಡ ಆಭರಣ.

ಹುಡುಗರೆ
ಒಂದು ದಿನ ನೀವು ಎತ್ತರಕ್ಕೆ ಏರಿದಾಗ
ನಿಮ್ಮ ಯಶಸ್ಸೇ ನಿಮ್ಮ ಪರಿಚಯವಾಗುತ್ತದೆ.
ಅಂದು ಜಗವೇ ನಿಮ್ಮನ್ನು ಗಮನಿಸುತ್ತದೆ.

ಹುಡುಗಿಯರ ಹಿಂದೆ ಸುತ್ತುವರಿಯುವುದಕ್ಕಿಂತ
ಪುಸ್ತಕಗಳ ಸುತ್ತ ಸುತ್ತಿರಿ
ಅವು ನಿಮ್ಮನ್ನು ಜಗತ್ತಿನ ಸುತ್ತಲೂ
ಗೌರವದಿಂದ ನಡೆಯುವಂತೆ ಮಾಡುತ್ತವೆ.

ಇಂದು ಒಂದು ಪುಟ ಓದಿ,
ನಾಳೆ ಒಂದು ಅಧ್ಯಾಯ ಮುಗಿಸಿ
ಮತ್ತೆ ದಿನ ಒಂದು ಕನಸು ಕಟ್ಟಿರಿ.

ಹುಡುಗರೆ
ಮೋಹದ ನೆರಳಲ್ಲ
ಜ್ಞಾನದ ಬೆಳಕಿನಲ್ಲಿ ನಡೆಯಿರಿ.
ನಿಮ್ಮ ಹೆಜ್ಜೆಗಳು ದಿಟ್ಟವಾಗಿರಲಿ
ನಿಮ್ಮ ಗುರಿ ಸ್ಪಷ್ಟವಾಗಿರಲಿ.

ಹುಡುಗಿಯರ ಹಿಂದೆ ಓಡುವ ಸಮಯ
ಪುಸ್ತಕಗಳ ಹಿಂದೆ ಓಡಿದರೆ
ನಾಳೆಯ ಸಮಾಜವೇ ನಿಮ್ಮ ಹಿಂದೆ
ಗರ್ವದಿಂದ ನಡೆಯುತ್ತದೆ.

ಇದು ಉಪದೇಶವಲ್ಲ
ಇದು ನಿಮ್ಮೊಳಗಿನ ಶಕ್ತಿಗೆ ಸ್ಮರಣೆ
ನೀವು ಕೇವಲ ಯಾರನ್ನೋ ಮೆಚ್ಚುವವರಲ್ಲ
ನೀವು ಸಾಧನೆ ಮಾಡುವವರು.

ಹುಡುಗರೆ
ಪುಸ್ತಕಗಳಿಗೆ ಸುತ್ತುವರಿಯಿರಿ
ಜ್ಞಾನಕ್ಕೆ ತಲೆಬಾಗಿರಿ
ಭವಿಷ್ಯ ನಿಮ್ಮ ಮುಂದೆ ತಲೆಬಾಗುತ್ತದೆ.

  • ಮೇಘರಾಜ ಚಲವಾದಿ,
    ಪತ್ರಿಕೋದ್ಯಮ ಅಂತಿಮ ವರ್ಷದ ವಿದ್ಯಾರ್ಥಿ,
    ಎಸ್ ಕೆ ಎನ್ ಜಿ ಕಾಲೇಜ್, ಗಂಗಾವತಿ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!