ಅಪ್ಪ ಎಂಬ ರೈಲು ಹಳಿ
ಜೀವನದ ದಾರಿಗೆ ದೀಪದ ಬೆಳಕು
ಅಮ್ಮ ಎಂಬ ಡಬ್ಬಿ ಮಮತೆಯ ಮಳೆ
ಪ್ರೀತಿಯ ಚಕ್ರದಲ್ಲಿ ಸಾಗುವ ಕೂಡು ಕುಟುಂಬ…?
ಮಕ್ಕಳೆಂಬ ಡಬ್ಬಿಗಳು ಕನಸಿನ ಹೊರೆ
ನಗುವಿನ ಹಾಡುಗಳು ಮನದೊಳಗೆ ತುಂಬಿ
ಹಳಿಯ ಮೇಲೆ ಸಾಗುವ ಕೂಡು ಕುಟುಂಬದ ರೈಲು
ಒಗ್ಗಟ್ಟೇ ಅದರ ಶಕ್ತಿ ಪ್ರೀತಿಯ ನೆಲೆ…?
ಅಪ್ಪನ ಪರಿಶ್ರಮದ ದಾರಿಯ ಬಲ
ಅಮ್ಮನ ಆರೈಕೆ ಬದುಕಿನ ಫಲ
ಮಕ್ಕಳ ಕನಸುಗಳು ಬಣ್ಣದ ಕಿಟಕಿ
ಸುಖದ ಪ್ರಯಾಣವೇ ಮನೆಯ ಸಂಭ್ರಮ…?
- ಮೇಘರಾಜ ಪತ್ರಿಕೋದ್ಯಮ ವಿದ್ಯಾರ್ಥಿ,
ಎಸ್ ಕೆ ಎನ್ ಜಿ ಕಾಲೇಜ್, ಗಂಗಾವತಿ.





















