
ಹುನಗುಂದ: ಪಟ್ಟಣದ ಗುದ್ದಿ ಕಾಯಕಯೋಗಿ ಶ್ರೀ ಬಸವಪ್ಪ ಹಾದಿಮನಿ ಶರಣ ತನ್ನ ದರ್ಶನ ಟ್ರಸ್ಟ್. ತಾಲೂಕ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಬಸವಪ್ಪ ಹಾದಿಮನಿ ಶರಣರ 43ನೇ ಪುಣ್ಯ ಸ್ಮರಣೆ, ದತ್ತಿ ಉಪನ್ಯಾಸ, ಕೃಷಿ ಪ್ರಶಸ್ತಿ ಪ್ರಧಾನ ಹಾಗೂ 44ನೇ ಮನೆ ಮನಗಳಿಗೆ ವಚನ ಸೌರಭ ಕಾರ್ಯಕ್ರಮ ಸೆ.11 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಪಟ್ಟಣದ ನ್ಯಾಯಲಯದ ಎದುರು ಶರಣರ ಗದ್ದುಗೆ ಹತ್ತಿರ ನಡೆಯಲಿದೆ ಎಂದು ರಾಷ್ಟ್ರ ಪ್ರಶಸ್ತಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಹಾಗೂ ನಿವೃತ್ತ ಶಿಕ್ಷಕ ಸಂಗಣ್ಣ ಎಮ್ಮಿ ಹೇಳಿದರು. ಬುಧವಾರ ಪಟ್ಟಣದ ಖಾಸಗಿ ನಿವಾಸ ಒಂದರಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತರಗಿ ಸಂಸ್ಥಾನ ಮಠ ಇಳಕಲ್ಲದ ಗುರು ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸುವರು, ಅಮೀನಗಡ-ಯರಿಗೋನಾಳ ಪ್ರಭುಶಂಕರೇಶ್ವರ ಮಠದ ಶಂಕರಾಜೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಮುಧೋಳದ ಸಾಹಿತಿ ಎಂ. ಜಿ. ದಾಸರ ಮುಖ, ಅತಿಥಿಗಳಾಗಿ ಆಗಮಿಸಲಿದ್ದು ಜಮಖಂಡಿ ಹುಲ್ಯಾಳದ ಪ್ರವಚನಕಾರ್ತಿ ಶ್ರೀದೇವಿ ಮಾತಾಜಿ ಅವರು ಶರಣ ಸಂಸ್ಕೃತಿ ಹಾಗೂ ಹಾದಿಮನಿ ಶರಣರ ಕಾಯಕ ನಿಷ್ಠೆ ಅನುಭವ ನೀಡುವರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ ಅಧ್ಯಕ್ಷ ಎ. ಎಸ್. ಪಾವಟೆ, ತಾಲೂಕ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಭು ಮಾಲಗಿತ್ತಿಮಠ ಉಪಸ್ಥಿತರಿರುವರು. ಈ ಬಾರಿ ಬಸವನ ಹಾದಿಮನಿ ಶರಣ ಟ್ರಸ್ಟ್ ವತಿಯಿಂದ ನೀಡುವ ಜಿಲ್ಲಾ ಮಟ್ಟ ಪ್ರಶಸ್ತಿಗೆ ಹುನಗುಂದದ ಸಂಗಣ್ಣ ಸಣ್ಣ ಸಂಗಪ್ಪ ನಾಗರಾಳ ಗದ್ದನಕೇರಿಯ ವಿದ್ಯಾ ಪರ್ವತಪ್ಪ ಬಾವಿ ಹೂವಿನಹಳ್ಳಿಯ ಬಸಪ್ಪ ಶಿವಪ್ಪ ಕೆಂದೂರ ಬಾಜಿನರಾಗಿದ್ದಾರೆ ಎಂದು ದರ್ಶನ ಟ್ರಸ್ಟಿನ ಕಾರ್ಯಾಧ್ಯಕ್ಷ ವೈ.ಎಂ. ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತು, ಅಧ್ಯಕ್ಷ ಎಸ್.ಎನ್.ಹಾದಿಮನಿ, ಅನ್ನದಾನೇಶ್ವರ ಶಿವಲಿಂಗಪ್ಪ ಹಾದಿಮನಿ ಇದ್ದರು.
- ಕರುನಾಡ ಕಂದ ಸುದ್ದಿ




















