ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

‘ಮಿನುಗುತಾರೆ’ ಪುಸ್ತಕ ಬರೆದ ರಾಜ್ಯದ ಪ್ರಥಮ ಬಾಲಕ ತಾನೀಶ್‌ಗೆ ಶ್ರೀ ಮಾರಿಕಾಂಬಾ ದೇವಾಲಯ ಟ್ರಸ್ಟ್ ಗೌರವ ಸನ್ಮಾನ

ವಿಶ್ವಮಟ್ಟದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ 20 ಕ್ಕೂ ಹೆಚ್ಚು ವಿಶ್ವದಾಖಲೆಗಳನ್ನು ಬರೆದು, ಕನ್ನಡದಲ್ಲಿ ‘ಮಿನುಗುತಾರೆ’ ಎಂಬ ಚುಟುಕು ಕವನ ಸಂಕಲನ ಪುಸ್ತಕವನ್ನು ಪ್ರಕಟಿಸುವ ಮೂಲಕ ರಾಜ್ಯದ ಪ್ರ ಪ್ರಥಮ ಬಾಲಕ ಎಂಬ ಕೀರ್ತಿಗೆ ಭಾಜನನಾಗಿರುವ ಅಪ್ರತಿಮ ಬಾಲ ಪ್ರತಿಭೆ, ಗ್ರ್ಯಾಂಡ್ ಮಾಸ್ಟರ್ ಖ್ಯಾತಿಯ, 3 ನೇ ತರಗತಿ ವಿದ್ಯಾರ್ಥಿ ಲಕ್ಕೂರಿನ ತಾನೀಶ್ ಎನ್. ಅವರನ್ನು ಮಾಲೂರಿನ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯ ಟ್ರಸ್ಟ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಬಗ್ಗೆ ಮಾತನಾಡಿದ ಶ್ರೀ ಮಾರಿಕಾಂಬಾ ದೇವಾಲಯ ಟ್ರಸ್ಟ್ ನ ಅಧ್ಯಕ್ಷರಾದ ವೆಂಕಟೇಶ್ ರವರು “ತನ್ನ ಅಸಾಧಾರಣ ಜ್ಞಾಪಕ ಶಕ್ತಿ, ಬಹುಮುಖ ಪ್ರತಿಭೆ ಹಾಗೂ ಸಾಹಿತ್ಯಿಕ ಆಸಕ್ತಿಯಿಂದ ನಾಡಿನ ಗಮನ ಸೆಳೆದಿರುವ ತಾನೀಶ್, ಕಿರಿಯ ಪ್ರಾಯದಲ್ಲೇ ಅತಿ ಹೆಚ್ಚು ವಿಶ್ವದಾಖಲೆಗಳನ್ನು ನಿರ್ಮಿಸಿದ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಸಾಹಿತ್ಯ ಕ್ಷೇತ್ರದಲ್ಲಿ ಈತನ ಸಾಧನೆಯನ್ನು ಪರಿಗಣಿಸಿ, ಮಾರಿಕಾಂಬಾ ದೇವಾಲಯದ ಆವರಣದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳು ಬಾಲಕನಿಗೆ ಸ್ಮರಣಿಕೆ ಹಾಗೂ ಶಾಲು ಹೊದಿಸಿ ಮಿನುಗುತಾರೆಯನ್ನು ಹರಸಿದ್ದೇವೆ ತಾಯಿ ಮಾರಿಕಾಂಬಾ ಎಲ್ಲಾವೂ ಒಳಿತನ್ನು ಮಾಡಲಿ” ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆಂಪಯ್ಯ, ಮಾರಿಕಾಂಬ ದೇವಾಲಯ ಟ್ರಸ್ಟ್‌ ನ ತಬಲ ನಾರಾಯಣಪ್ಪ, ನಂಜುಂಡಪ್ಪ, ಅಂಜನಿ ಹನುಮಂತಪ್ಪ, ಲೆಕ್ಕ ಪತ್ರ ಅಧಿಕಾರಿ ಮಂಜುನಾಥ್, ಮ್ಯಾನೇಜರ್ ಮಂಜುನಾಥ್, ಸಾಧಕನ ತಂದೆ ಲಕ್ಕೂರು ಎಂ.ನಾಗರಾಜ್, ತಾಯಿ ಶ್ರೀಮತಿ ಶ್ವೇತನಾಗರಾಜ್, ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಮಾಜಿ ನಗಸರಭಾ ಸದಸ್ಯ ಮುರಳೀಧರ್, ವೇಮನ, ವಕೀಲರಾದ ಜಗನ್ನಾಥ್, ಲಕ್ಕೂರು ಪುಡ್ ರಮೇಶ್, ಮಾಜಿ ಪುರಸಭಾ ಅಧ್ಯಕ್ಷರಾದ ಸಿ.ಪಿ.ನಾಗರಾಜ್, ಕ್ರೀಡಾ ಕೋಚ್ ಬುಜ್ಜಿ ಶ್ರೀನಾಥ್, ಮಾಲೂರು ಮಾರಿಕಾಂಬಾ ದೇವಾಲಯ ಸಮಿತಿಯ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!