ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಲ್ಯಾಣ ನಾಡಿನಲ್ಲಿ ಆಧ್ಯಾತ್ಮಿಕ ಕ್ರಾಂತಿಯನ್ನು ಗೈದತಂಹ ಶಿವಾಚಾರ್ಯ ಪರಂಪರೆಯ ಸಿದ್ಧಕುಲ ಚಕ್ರವರ್ತಿ ಶ್ರೀ ಘನಲಿಂಗ ರುದ್ರಮುನಿಗಳು

ಬಸವಕಲ್ಯಾಣ: ಕಲ್ಯಾಣದ ಶಿವಶರಣರ ಚಳವಳಿಯ ಸಂದರ್ಭದಲ್ಲಿ ಶರಣರು ಕೇವಲ ವೈಯಕ್ತಿಕ ಭಕ್ತಿಗೆ ಸೀಮಿತವಾಗದೆ, ಸಮಾನತೆ, ಸತ್ಯ, ಕಾಯಕ, ದಾಸೋಹ ಹಾಗೂ ಶಿವಾನುಭವದ ಮೌಲ್ಯಗಳ ಆಧಾರದ ಮೇಲೆ ಸಮಾಜವನ್ನು ಸಂಘಟಿಸಿದವರು. ಈ ಸಂಘಟನೆಯಲ್ಲಿ ಶ್ರೀ ಘನಲಿಂಗ ರುದ್ರಮುನಿಯವರ ಪಾತ್ರ ಮಹತ್ವದ್ದಾಗಿತ್ತು ಎಂದು ನಗರದ ಸಂಸ್ಥಾನ ಗವಿಮಠದ ಪೂಜ್ಯಶ್ರೀ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.
ಪರಂಪರೆಯ ಪ್ರಕಾರ, ಶರಣರ ಮೇಲೆ ಸಂಕಷ್ಟದ ಪರಿಸ್ಥಿತಿ ಎದುರಾದಾಗ ರುದ್ರಮುನಿಯವರು ಶರಣರಿಗೆ ನೆರವಾಗಿ ನಿಂತು ಸಮಾಜದ ರಕ್ಷಣೆಗೆ ಕೈಜೋಡಿಸಿದರು. ಶರಣರಲ್ಲಿ ಏಕತೆ ಮತ್ತು ಪರಸ್ಪರ ಸಹಕಾರ ಬೆಳೆಸುವುದು, ಶಿವಭಕ್ತಿ ಹಾಗೂ ಧಾರ್ಮಿಕ ಚಿಂತನೆಯ ಪ್ರಸಾರ, ಸಾಮಾಜಿಕ ಜಾಗೃತಿ ಮೂಡಿಸುವುದು, ವಿವಿಧ ಸಮುದಾಯಗಳನ್ನು ಧಾರ್ಮಿಕ ಚಿಂತನೆಯೊಂದಿಗೆ ಬೆಸೆಯುವುದು, ಕಾಯಕ–ದಾಸೋಹ ಮತ್ತು ಸಮಾನತೆಯ ಮೌಲ್ಯಗಳನ್ನು ಜನರಿಗೆ ತಲುಪಿಸುವುದು ಹಾಗೂ ಸಂಕಷ್ಟದ ಸಂದರ್ಭದಲ್ಲಿ ಶರಣರಿಗೆ ಮಾರ್ಗದರ್ಶನ ನೀಡುವುದು ಅವರ ಕಾರ್ಯಗಳ ಪ್ರಮುಖ ಆಶಯಗಳಾಗಿದ್ದವು ಎಂದು ಅವರು ವಿವರಿಸಿದರು.
ಇದಲ್ಲದೆ, ಚಂಗಣಿಗಿಲ ಮಂಟಪದಲ್ಲಿ ರುದ್ರಮುನಿಯವರು ಏಕಾಂತ ಸಾಧನೆ ಮಾಡುತ್ತಿದ್ದರು ಎಂಬ ಪರಂಪರೆಯ ಉಲ್ಲೇಖವಿದೆ ಎಂದು ಪೂಜ್ಯರು ತಿಳಿಸಿದರು.
ನಗರದ ಸಂಸ್ಥಾನ ಗವಿಮಠದಲ್ಲಿ ಪವಿತ್ರ ಶ್ರಾವಣ ಮಾಸದ ಅಂಗವಾಗಿ ಗವಿಮಠ ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಿದ್ದ “ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂದೇಶ” ಕುರಿತ ವಿಶೇಷ ಉಪನ್ಯಾಸಮಾಲೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರಾದ ಡಾ. ಬಸವರಾಜ ಸ್ವಾಮಿ ಅವರು ಮಾತನಾಡುತ್ತಾ ಶ್ರೀ ರುದ್ರಮುನಿ ಶಿವಯೋಗಿಗಳು ಕಾಲಜ್ಞಾನ ರಚಿಸಿದವರು ಎಂಬ ಪರಂಪರೆಯ ಉಲ್ಲೇಖಗಳಿವೆ. 12ನೇ ಶತಮಾನದ ಶರಣ ಪರಂಪರೆಯೊಂದಿಗೆ ಅವರನ್ನು ಸಂಪರ್ಕಿಸಲಾಗಿದ್ದು, ಸಾಮಾಜಿಕ, ಧಾರ್ಮಿಕ ಹಾಗೂ ಭವಿಷ್ಯದ ಬದಲಾವಣೆಗಳ ಕುರಿತು ಕಾಲಜ್ಞಾನದಲ್ಲಿ ಉಲ್ಲೇಖಗಳಿವೆ ಎಂದು ಹೇಳಿದರು.
ಕಲ್ಯಾಣದ ಚಂಗಣಿಗಿಲ ಮಂಟಪದಲ್ಲಿದ್ದ ಶಿವಾನುಭವ ಮಂಟಪದ ಪರಂಪರೆಯೊಂದಿಗೆ ರುದ್ರಮುನಿ ಶಿವಯೋಗಿಗಳ ಹೆಸರು ಸಂಬಂಧಿಸಿದೆ. ಕಲ್ಯಾಣದ ಶಿವಶರಣರ ಪರಂಪರೆ ಹಾಗೂ ಶಿವಾನುಭವ ಮಂಟಪದ ಪರಂಪರೆಯನ್ನು ಅವರು ಮುಂದುವರಿಸಿಕೊಂಡು ಬಂದವರು ಎಂಬ ದಾಖಲೆಗಳಿವೆ. ಕಲ್ಯಾಣದ ಮೂಲ ಮಠ ಎಂದು ಪರಿಗಣಿಸಲ್ಪಡುವ ಗವಿಮಠದಲ್ಲಿ ಅಗಾಧವಾದ ಆಧ್ಯಾತ್ಮಿಕ ಶಕ್ತಿ ಅಡಗಿದೆ. ಭಕ್ತರು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ಬರುವ ಪುಣ್ಯಕ್ಷೇತ್ರ ಇದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಠಾಳ ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ದಯಾನಂದ ರೆಡ್ಡಿ ಮಾತನಾಡುತ್ತಾ ಘಟ ರೂಪದಲ್ಲಿದ್ದ ಮಠವನ್ನು ಅಭಿವೃದ್ಧಿಪಡಿಸಿ ಉತ್ತಮ ರೀತಿಯಲ್ಲಿ ಬೆಳೆಸಿರುವ ಕೀರ್ತಿ ಪೂಜ್ಯ ಅಭಿನವ ಶ್ರೀಗಳಿಗೆ ಸಲ್ಲುತ್ತದೆ. ಈ ಮಠದ ಪರಮ ಭಕ್ತರಾಗಿ ಇರುವುದಕ್ಕೆ ನಮಗೆ ಸಂತೋಷವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಣ್ಣ ಶಾಂತಪ್ಪ ಶೀಲವಂತ ವಹಿಸಿದ್ದರು. ಲಕ್ಷ್ಮಿಪುತ್ರ ನಿಂಬಾಳ್ಕರ್ ಹಾಗೂ ಓಂಕಾರ್ ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಭಿಷೇಕ ರಾಮಣ್ಣನವರ ಸ್ವಾಗತಿಸಿದರು. ಮಲ್ಲಿಕಾರ್ಜುನ ಅಲಗೂಡೆ ನಿರೂಪಿಸಿದರು. ಶರಣಬಸಪ್ಪ ಅಲಗುಡೆ ಪ್ರಾರ್ಥನಾ ಗೀತೆ ಹಾಡಿದರು.
ಕಾರ್ಯಕ್ರಮದಲ್ಲಿ ಬಸವಂತಪ್ಪ ಲವಾರೆ, ರಾಕೇಶ್ ಪುರವಂತ, ಪ್ರೊ.ರುದ್ರೇಶ್ವರ ಗೋರ್ಟಾ, ಮಲ್ಲಿಕಾರ್ಜುನ್ ಹೊಳಕುಂದೆ, ಸುರೇಖಾ ಸಜ್ಜನಶೆಟ್ಟಿ, ಡಾ. ವಿ.ಎಸ್. ರಾಜೋಳೆ, ಶಿವಕುಮಾರ ಮುನ್ನೋಳೆ, ವಿಠ್ಠಲ್ ರಾಯಪ್ಪನೊರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ : ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!