ಬೆಂಗಳೂರು: ಎಸ್ ಐ ಆರ್-2026 – ಹಿರಿಯ ನಾಗರಿಕರು/ವಿಕಲಚೇತನರು/ಅಸ್ವಸ್ಥರು/ವಿದೇಶದಲ್ಲಿರುವ ಮತದಾರರಿಗೆ ನೀಡಲಾದ ನೋಟಿಸ್‌ಗಳ ವಿಲೇವಾರಿ – ವಯಸ್ಕ ಕುಟುಂಬ ಸದಸ್ಯರ ಮೂಲಕ ERO/AERO ಮುಂದೆ ಹಾಜರಾಗುವ ಕುರಿತು ಭಾರತ ಮುಖ್ಯ ಚುನಾವಣಾ ಆಯುಕ್ತರು ಪ್ರಕಟಣೆಯಲ್ಲಿ ರಾಜ್ಯದ ಜಿಲ್ಲಾ ಚುನಾವಣಾಧಿಕಾರಿ, ಬೆಂಗಳೂರು ಹಾಗೂ ಮುಖ್ಯ ಆಯುಕ್ತರು, GBA, ಎಲ್ಲಾ ಜಿಲ್ಲೆಗಳ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಉಪ ಆಯುಕ್ತರು, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳು, BBMP ಕೇಂದ್ರ, BBMP ಉತ್ತರ ಮತ್ತು BBMP ದಕ್ಷಿಣ ಚುನಾವಣಾ ಜಿಲ್ಲೆಗಳು ಹಾಗೂ ಬೆಂಗಳೂರು ನಗರ ನಿಗಮಗಳ (ಉತ್ತರ, ದಕ್ಷಿಣ ಮತ್ತು ಕೇಂದ್ರ) ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಮತ್ತು ಬೆಂಗಳೂರು ನಗರ ಉಪ ಆಯುಕ್ತರು ಅವರ ಗಮನವನ್ನು ವಿಷಯ ಹಾಗೂ ಉಲ್ಲೇಖದತ್ತ ಸೆಳೆಯಲು ಈ ಕೆಳಗಿನ ವಿಷಯಗಳನ್ನು ಪ್ರಸ್ತಾಪಿಸಿದರು.
ಹಿರಿಯ ನಾಗರಿಕರು/ವಿಕಲಚೇತನರು/ಅಸ್ವಸ್ಥರು/ವಿದೇಶದಲ್ಲಿರುವ ಮತದಾರರಿಗೆ ನೀಡಲಾಗಿರುವ ನೋಟಿಸ್‌ಗಳ ವಿಲೇವಾರಿಗಾಗಿ, ಅವರ ಪರವಾಗಿ ಯಾವುದೇ ವಯಸ್ಕ ಕುಟುಂಬ ಸದಸ್ಯರು ERO/AERO ಅವರ ಮುಂದೆ ಖುದ್ದಾಗಿ ಹಾಜರಾಗಿ, ಸಂಬಂಧಪಟ್ಟ ಮತದಾರರಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳು/ಮಾಹಿತಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸುವಂತೆ EROಗಳು ಮತ್ತು AEROಗಳಿಗೆ ಅಗತ್ಯ ಸೂಚನೆಗಳನ್ನು ನೀಡುವಂತೆ ಕೋರಲಾಗಿದೆ.
ಇದಲ್ಲದೆ, EROಗಳು/AEROಗಳು ತಮ್ಮ ಹಂತದಲ್ಲಿ ವಾರಕ್ಕೊಮ್ಮೆ ನಡೆಯುವ ರಾಜಕೀಯ ಪಕ್ಷಗಳ ಸಭೆಗಳಲ್ಲಿ ನೋಟಿಸ್‌ಗಳನ್ನು ನೀಡುವ ಹಾಗೂ ಅವುಗಳನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಅನುಸರಿಸಲಾಗುತ್ತಿರುವ ಕಾರ್ಯವಿಧಾನದ ಕುರಿತು ವಿವರಿಸುವಂತೆ ಕೋರಲಾಗಿದೆ ಎಂದು ಎಸ್. ಯೋಗೇಶ್ವರ, ಜಂಟಿ ಮುಖ್ಯ ಚುನಾವಣಾಧಿಕಾರಿ, DPAR (ಚುನಾವಣೆಗಳು) ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ ಬೆಂಗಳೂರು




















