
ಹೋಳಿಗೆ ತುಪ್ಪ ಸವಿದ 10 ಸಾವಿರ ಭಕ್ತರು
ಯಲಬುರ್ಗಾ : ಪಟ್ಟಣದ ಸುಕ್ಷೇತ್ರ ಶ್ರೀ ವಿಜಯದುರ್ಗಾ ದೇವಿಯ ಜಾತ್ರೋತ್ಸವ ಅದ್ದೂರಿಯಾಗಿ ಡೊಳ್ಳು,ಕರಡಿ ಮಜಲು,ವೀರಗಾಸೆ, ಬ್ಯಾಂಡು ಮೇಳ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಭವ್ಯವಾದ ಮೆರವಣಿಗೆ ಪಟ್ಟಣದ ಪ್ರಮುಖ ರಾಜ ಬೀದಿಯಲ್ಲಿ 201 ಕುಂಭ ಕಳಸದೊಂದಿಗೆ ಸಡಗರ ಸಂಭ್ರಮದಿಂದ ಜರುಗಿತು.
ಈ ವೇಳೆ ದೇವಸ್ಥಾನದ ಸರ್ವ ಪದಾಧಿಕಾರಿಗಳು, ಸದಸ್ಯರು, ಗುರು ಹಿರಿಯರು, ಯುವಕರು, ಮಹಿಳೆಯರು, ಪುರಾಣ ಪ್ರವಚನಕಾರರು,ತಬಲಾ ಹಾಗು ಸಂಗೀತ ಬಳಗದ ವಿವಿದ ಕಲಾವಿದರು ,ರಾಜಕೀಯ ಪಕ್ಷದ ವಿವಿಧ ಮುಖಂಡರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಈ ಸಮಯದಲ್ಲಿ ಕೊಪ್ಪಳ, ಗದಗ, ಬಳ್ಳಾರಿ,ರಾಯಚೂರು ಸೇರಿದಂತೆ ಸುತ್ತಮುತ್ತಲಿನ 10 ಸಾವಿರಕ್ಕೂ ಅಧಿಕ ಭಕ್ತರು ಬಿಸಿ ಬಿಸಿ ಹೋಳಿಗೆ,ತುಪ್ಪ, ಸಂಡಿಗೆ, ಶುಚಿ ರುಚಿಯಾದ ಅನ್ನ ಪ್ರಸಾದವನ್ನು ಸವಿದರು.




















