ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಷ್ಟ್ರಕವಿ ಕುವೆಂಪು ನಿವಾಸದಲ್ಲಿ ಬಾಲಕವಿಯ ಸಂಭ್ರಮ: ಶ್ರೀಮತಿ ತಾರಿಣಿ ಚಿದಾನಂದ ಗೌಡರ ಆಶೀರ್ವಾದ ಪಡೆದ ತಾನೀಶ್‌ .ಎನ್

ಬಾಲಕವಿ ತಾನೀಶ್‌.ಎನ್. ಅವರು ಇಲ್ಲಿನ ಪ್ರತಿಷ್ಠಿತ ‘ಉದಯರವಿ’ ನಿವಾಸದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪುತ್ರಿ ಶ್ರೀಮತಿ ತಾರಿಣಿ ಚಿದಾನಂದ ಗೌಡ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಈ ಆತ್ಮೀಯ ಭೇಟಿಯ ಸಂದರ್ಭದಲ್ಲಿ ಬಾಲಕವಿ ತಾನೀಶ್‌ ಅವರು ತಾವು ರಚಿಸಿರುವ ‘ಮಿನುಗುತಾರೆ’ ಎಂಬ ಚುಟುಕು ಕವನ ಸಂಕಲನವನ್ನು ತಾರಿಣಿ ಚಿದಾನಂದ ಗೌಡ ಅವರಿಗೆ ಪ್ರೀತಿಯಿಂದ ಸಮರ್ಪಿಸಿದರು. ಕೃತಿಯನ್ನು ಸ್ವೀಕರಿಸಿ, ಬಾಲಕವಿಯ ಸಾಹಿತ್ಯಾಸಕ್ತಿಯನ್ನು ಮೆಚ್ಚಿದ ತಾರಿಣಿ ಗೌಡ ಅವರು, ಬಾಲಕವಿಗೆ ಉಜ್ವಲ ಭವಿಷ್ಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲಿ ಎಂದು ಮನಃಪೂರ್ವಕವಾಗಿ ಆಶೀರ್ವದಿಸಿದರು.

“ಕಿರಿಯ ವಯಸ್ಸಿನಲ್ಲೇ ಸಾಹಿತ್ಯದತ್ತ ಆಸಕ್ತಿ ತಳೆದು, ‘ಮಿನುಗುತಾರೆ’ಯಂತಹ ಚುಟುಕು ಕವನ ಸಂಕಲನವನ್ನು ರಚಿಸಿರುವುದು ನಿಜಕ್ಕೂ ಸಂತಸದ ವಿಷಯ. ಬಾಲಕವಿ ತಾನೀಶ್‌ ಅವರ ಸಾಹಿತ್ಯಿಕ ಪಯಣ ಹೀಗೆಯೇ ಮುಂದುವರಿಯಲಿ. ಕಾವ್ಯ ಕ್ಷೇತ್ರದಲ್ಲಿ ಅವರು ಇನ್ಮುಂದೆ ಎತ್ತರಕ್ಕೆ ಬೆಳೆದು, ನಾಡಿಗೆ ಹೆಮ್ಮೆ ತರಲಿ ಎಂದು ಹಾರೈಸುತ್ತೇನೆ.” ಎಂದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!